ಮತ್ತದೇ ಪ್ರಶ್ನೆ?
ಊರು ಕೇರಿ ದಾಟಿ
ಬಂತು ನೋಡಿ ಸಿಟಿ!
ನೀರು ತುಂಬಿ ಕೊಳೆತ ನಾತ
ಕಸದ ರಾಶಿ ಸುತ್ತ ಮುತ್ತ!
ಕಣ್ಣು ಮೂಗು ಎರಡೂ ಘಾಸಿ
ಹಳ್ಳಿಯದುವೆ ಎಷ್ಟೋ ವಾಸಿ!!!
ಸುಳಿಯಿತೆನ್ನ ಚಿತ್ತ,
ತುಂಬಿದ ದವಾಖಾನೆಯತ್ತ!
ಉಗುಳಿದರೂ ರೋಗ,
ಕೆಮ್ಮಿದರೂ ರೋಗ!
ಸಿರಿವಂತರ ವೇಗ,
ದವಾಖಾನೆಗಿಲ್ಲ ಬೀಗ!!!
ಬಂದವಳೊಬ್ಬ ಸಿರಿವಂತ ಕನ್ಯೆ
ಹಡೆದ ಮಗುವದು ಹೆಣ್ಣೆ… !
ಅದಾವ ರೋಗವೋ ಕಾu
ಕಸದ ರಾಶಿಯಲಿಟ್ಟಳು ಮಗುವ ಜಾಣೆ….!
ಹಳ್ಳಿಯ ಮುಗುದೆಯ ಮಡಿಲು ತುಂಬಿತು.
ಸಿರಿವಂತೆಯ ಒಡಲು ಜಾರಿತು!!!
ಮತ್ತದೇ ಪ್ರಶ್ನೆ???
ಏನಿದು ಹೊಸ ರೋಗ?
ಹೆಣ್ಣಿಗೆ ಹೆಣ್ಣೇ ಶತ್ರುವೇಕೇ?
ಗಂಡಿನ ಸ್ಥಾನಕೂ ಸಮವಲ್ಲವೇ ಆಕೆ?
– ಅಶೋಕ್ ಕೆ.ಜಿ, ಮಿಜಾರು
ನಗರವಾಸಿಗಳು ಖಂಡಿತವಾಗಿ ಈ ಕವನ ಓದಲೇ ಬೇಕು.