ಗಝಲ್
ವಸಂತಮಯದಿ ಹಸಿರುಡುವ ಧರೆಯೇ ಮಮ್ಮಳಿದು
ಸಂತಸವಿಲ್ಲದೆ ಇಂಚಿಂಚು ಕರಗುತಿರುವೆ ಮಮಕರಿಸು
ಮರತದಿಂದ ಮರಳಿ ಬಾ ಹಸಿರಾಗಿಸು ಉಸಿರಿಳಿದು
ಮರಗೂಳದೆ ಬೆಂದು ಬಸವಳಿಯುತಿರುವೆ ದಯೆಯಿರಿಸು
ಮಧುರಿಮೆಯ ಭೂರಮೆಯೆ ನಂಬಿಕೆಯಿಡು ಮನಂಬಸದೆ
ಆದರದಿ ಕಾಪಿಡುವೆ ಮನವರಿಕೆ ಮಾಡುವೆ ಸಹಕರಿಸು
ಮದವಿಳಿಯುತಿಹುದು ಪುರಜನರಲ್ಲಿ ನೇಸರನತಾಪದ
ಮದಿಪರಿತು ಹಸಿರ ಚಿಗುರಿಸುತಿಹರು ಒಲವಿರಿಸು
ಹೂಳುತಿಹ ಹೆಣರಾಶಿಯ ಕಂಡೇಕೆ ಮೊಗವಳುತಿಹುದು
ಹಳುವು ಮುರುಟಿದ ತಪ್ಪಾಗಿದೆ ಪ್ರೀತಿಯಿಂದ ಕನಿಕರಿಸು
ಬರಿದೊರೆಗೆ ತರಗೆಲೆಯ ಹಸಿರು ರವಿತಾಪಕೆ ಉರಿಯುತಿಹುದು
ಭರವಸೆಯಿಡು ಹಸಿರಿಡುವೆನೊಡಲಿಗೆ ಉರಿಯದೆ ಮಮಕರಿಸು
ನಿನ್ನೊಡಲ ಬರಿದಾಗಲು ಬಿಡಲೆಂದೆಂದು ಭಾಗ್ಯಳು
ನನ್ನೊಡಲಿನಂತೆ ಕಾಪಿಡುತ ಹಸಿರ ಕಾಯ್ವಳು
-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
ಗಝಲ್ ಚೆನ್ನಾಗಿ ಮೂಡಿಬಂದಿದೆ.. ಅಭಿನಂದನೆಗಳು ಗೆಳತಿ ಭಾಗ್ಯಲಕ್ಷ್ಮಿ.
ಚಂದದ ಗಝಲ್
ಚೆನ್ನಾಗಿದೆ