ಬೆಳಕು-ಬಳ್ಳಿ

ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು

Share Button

ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/
ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/
ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/

ಕಾಣದ ರೂಪವ ಕಲ್ಪಿಸಿ ಕೆತ್ತುವೆವು ಶಿಲಾಮೂರ್ತಿಗಳ/
ಸ್ಥಾಪಿಸುವೆವು ದೇಗುಲ ದೇವಾಲಯಗಳಲ್ಲಿ ವಿಗ್ರಹಗಳ/
ಅಭಿಷೇಕ ಮಾಡಿ ಅರ್ಪಿಸುವೆವು ಹೂಹಣ್ಣು ಹಂಪಲುಗಳ/
ಪ್ರಶಂಶಿಸುವೆವು ಮಹಿಮೆಗಳ ಸ್ತುತಿಸಿ ಮಂತ್ರಘೋಷಗಳ/

ಯಾವ ಕಾರಣಕೆ ಕಾಣದ ಕೈಗಳ ಪೂಜಿಸಿ ಭಜಿಸಿ ಅನುದಿನವು/
ವಾಸ್ತವಿಕತೆಯಲ್ಲಿ ಬೆಂಬಲವಾಗಿರುವ ಕೈಗಳ ಅಲಕ್ಷಿಸುವೆವು/
ಯಾವ ಉದ್ದೇಶಕೆ ಕಾಣದ ಕೈಗಳ ಗೌರವಿಸಿ ನಿತ್ಯನೂತನವು/
ಯಥಾರ್ಥದಲ್ಲಿ ಒತ್ತಾಸೆಯಾಗಿರುವ ಕೈಗಳ ನಿರ್ಲಕ್ಷಿಸವೆವು/

ಕೋರಿಕೆಗಳು ಸಫಲವಾಗಲಿ ವಿಫಲವಾಗಲಿ ಪ್ರಾರ್ಥಿಸುವೆವು/
ಧರ್ಮಕರ್ಮಗಳ ಕ್ಷಮೆಯಲ್ಲಿ ಆರತಿಗಳಲ್ಲಿ ಉಪಾಸಿಸುವೆವು/
ದೈವಶಕ್ತಿಯ ಮೆಚ್ಚಿಸಲು ಗುಡಿ ಗೋಪುರಗಳ ಶೃಂಗರಿಸುವೆವು/
ಧೃಢನಿಷ್ಠೆಯಲ್ಲಿ ಜಪಿಸುತ ಮಂಗಳಾರತಿಯಲ್ಲಿ ಬೆಳಗುವೆವು/

ಜೀವಂತವಾಗಿರುವ ಕರುಣಾಮಯಿಗಳ ನಮಿಸಿ ಕೃತಜ್ಞತೆಯಲ್ಲಿ
ಪರಿಶುದ್ಧ ಮನೋವೃತ್ತಿಯಲಿ ಪರಿಗಣಿಸಿ ಸಮರ್ಥಿಸಿ ಮೆಚ್ಚುಗೆಯಲ್ಲಿ
ಆತ್ಮೀಯರಾಗಿರುವ ಬಂಧುಬಳಗ ಮಿತ್ರರ ವಂದಿಸಿ ಧನ್ಯತೆಯಲ್ಲಿ/
ನಿಷ್ಕಪಟ ಮನೋಭಾವದಲ್ಲಿ ಸನ್ಮಾನಿಸಿ ಅಭಿನಂದಿಸಿ ನೆಚ್ಚುಗೆಯಲ್ಲಿ/

-ಮಿತ್ತೂರು ರಾಮಪ್ರಸಾದ್

5 Comments on “ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು

  1. ಹೌದು ಅಗೋಚರ ಶಕ್ತಿ ಯೇ ನಮ್ಮ ನ್ನೆಲ್ಲಾ ನೆಡೆಸುವ ಸೂತ್ರಧಾರ..ಅವರವರಿಗೆ ಸರಿಕಂಡಂತೆ ಆರಾಧನಾ ಮನೋಭಾವ.. ಎಂಬ ಸಂದೇಶ ಸಾರುವ ಕವನ ಚೆನ್ನಾಗಿ ದೆ ಸಾರ್

  2. ಭಕ್ತಿಯೂ ನಂಬಿಕೆಯ ಬುನಾದಿ ಮೇಲೆ ನಿಂತಿದೆ, ಹಾಗಾಗಿ ಒಳ್ಳೆಯದಾಗುವುದೆಂದು ನಂಬಿ ಕೈ ಮುಗಿಯುವೆವು

Leave a Reply to ಗಾಯತ್ರಿ ದೇವಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *