
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/
ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/
ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/
ಕಾಣದ ರೂಪವ ಕಲ್ಪಿಸಿ ಕೆತ್ತುವೆವು ಶಿಲಾಮೂರ್ತಿಗಳ/
ಸ್ಥಾಪಿಸುವೆವು ದೇಗುಲ ದೇವಾಲಯಗಳಲ್ಲಿ ವಿಗ್ರಹಗಳ/
ಅಭಿಷೇಕ ಮಾಡಿ ಅರ್ಪಿಸುವೆವು ಹೂಹಣ್ಣು ಹಂಪಲುಗಳ/
ಪ್ರಶಂಶಿಸುವೆವು ಮಹಿಮೆಗಳ ಸ್ತುತಿಸಿ ಮಂತ್ರಘೋಷಗಳ/
ಯಾವ ಕಾರಣಕೆ ಕಾಣದ ಕೈಗಳ ಪೂಜಿಸಿ ಭಜಿಸಿ ಅನುದಿನವು/
ವಾಸ್ತವಿಕತೆಯಲ್ಲಿ ಬೆಂಬಲವಾಗಿರುವ ಕೈಗಳ ಅಲಕ್ಷಿಸುವೆವು/
ಯಾವ ಉದ್ದೇಶಕೆ ಕಾಣದ ಕೈಗಳ ಗೌರವಿಸಿ ನಿತ್ಯನೂತನವು/
ಯಥಾರ್ಥದಲ್ಲಿ ಒತ್ತಾಸೆಯಾಗಿರುವ ಕೈಗಳ ನಿರ್ಲಕ್ಷಿಸವೆವು/
ಕೋರಿಕೆಗಳು ಸಫಲವಾಗಲಿ ವಿಫಲವಾಗಲಿ ಪ್ರಾರ್ಥಿಸುವೆವು/
ಧರ್ಮಕರ್ಮಗಳ ಕ್ಷಮೆಯಲ್ಲಿ ಆರತಿಗಳಲ್ಲಿ ಉಪಾಸಿಸುವೆವು/
ದೈವಶಕ್ತಿಯ ಮೆಚ್ಚಿಸಲು ಗುಡಿ ಗೋಪುರಗಳ ಶೃಂಗರಿಸುವೆವು/
ಧೃಢನಿಷ್ಠೆಯಲ್ಲಿ ಜಪಿಸುತ ಮಂಗಳಾರತಿಯಲ್ಲಿ ಬೆಳಗುವೆವು/
ಜೀವಂತವಾಗಿರುವ ಕರುಣಾಮಯಿಗಳ ನಮಿಸಿ ಕೃತಜ್ಞತೆಯಲ್ಲಿ
ಪರಿಶುದ್ಧ ಮನೋವೃತ್ತಿಯಲಿ ಪರಿಗಣಿಸಿ ಸಮರ್ಥಿಸಿ ಮೆಚ್ಚುಗೆಯಲ್ಲಿ
ಆತ್ಮೀಯರಾಗಿರುವ ಬಂಧುಬಳಗ ಮಿತ್ರರ ವಂದಿಸಿ ಧನ್ಯತೆಯಲ್ಲಿ/
ನಿಷ್ಕಪಟ ಮನೋಭಾವದಲ್ಲಿ ಸನ್ಮಾನಿಸಿ ಅಭಿನಂದಿಸಿ ನೆಚ್ಚುಗೆಯಲ್ಲಿ/
-ಮಿತ್ತೂರು ರಾಮಪ್ರಸಾದ್
ಹೌದು ಅಗೋಚರ ಶಕ್ತಿ ಯೇ ನಮ್ಮ ನ್ನೆಲ್ಲಾ ನೆಡೆಸುವ ಸೂತ್ರಧಾರ..ಅವರವರಿಗೆ ಸರಿಕಂಡಂತೆ ಆರಾಧನಾ ಮನೋಭಾವ.. ಎಂಬ ಸಂದೇಶ ಸಾರುವ ಕವನ ಚೆನ್ನಾಗಿ ದೆ ಸಾರ್
ಚಂದವಿದೆ
ಸೊಗಸಾದ ಕವನ
ಭಕ್ತಿಯೂ ನಂಬಿಕೆಯ ಬುನಾದಿ ಮೇಲೆ ನಿಂತಿದೆ, ಹಾಗಾಗಿ ಒಳ್ಳೆಯದಾಗುವುದೆಂದು ನಂಬಿ ಕೈ ಮುಗಿಯುವೆವು
ಕಲ್ಲು ನಾಗರ ಕಂಡರೆ ಹಾಲನೆರೆಯುವರಯ್ಯ
ದಿಟ ನಾಗರ ಬಂದರೆ ಹೊಡೆದು ಹಾಕುವರಯ್ಯ
ಅರ್ಥಗರ್ಭಿತವಾದ ಕವನ