ಲಹರಿ

“ನೆರಳು” ಧಾರವಾಹಿ : ನನ್ನ ಅನಿಸಿಕೆ

Share Button

“ನೆರಳು” ಧಾರವಾಹಿ ಸಂಪೂರ್ಣವಾಗಿ ಓದಿದೆ ಎನ್ನುವುದಕ್ಕಿಂತ, ಎಂದಿನಂತೆ ಲೇಖಕಿ ಶ್ರೀಮತಿ. ನಾಗರತ್ನ ಅವರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಬಿಟ್ಟಿತು.

ಕಾದಂಬರಿ ಪೂರ್ತಿಯಾಗಿ ಲಕ್ಷ್ಮಿ ಮತ್ತು ಭಾಗ್ಯರ ಎರಡೂ ಪಾತ್ರಗಳೂ, 2-3 ತಲೆಮಾರುಗಳ ಹಿಂದಿನ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕುಟುಂಬ ಜೀವನಕ್ಕೆ ಕೊಡುತ್ತಿದ್ದ ಆದ್ಯತೆ ಹಾಗೂ ಅದನ್ನು ಸಮರ್ಥವಾಗಿ ಉಳಿಸಿ ಬೆಳಸುವಲ್ಲಿ ನಿಸ್ವಾರ್ಥತೆಯನ್ನು ಅಳವಡಿಸಿಕೊಂಡೂ ಅದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದುದನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದಾರೆ.

ಲಕ್ಷ್ಮಿ ಸಂದರ್ಭ ಮತ್ತು ಸನ್ನಿವೇಶಗಳಿಂದಾಗಿ ಪರಿಸ್ಥಿತಿಯನ್ನು ಎದುರಿಸುವ ಛಾತಿಯನ್ನು ಹೊಂದಿದ್ದಳು, ಆದರೆ, ಲಕ್ಷ್ಮಿಗಿಂತ ಭಾಗ್ಯ ಭಿನ್ನ. ಅವಳು ಮಹತ್ವಾಕಾಂಕ್ಷಿ ಮತ್ತು ಅದಕ್ಕೆ ಬೇಕಾದ ಬುದ್ಧಿಮತ್ತೆ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದವಳಾದರೂ, ತನ್ನ ತವರು ಮತ್ತು ಸೇರಿದ ಮನೆಯ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗೆ ಸರಿಸಿದರೂ ಶ್ರೀಗಂಧದ ಪರಿಮಳ ಪಸರಿಸುವಂತೆ, ದಿಕ್ಕನ್ನು ಬದಲಿಸಿಯೂ ಸಹ ಸಾರ್ಥಕತೆಯನ್ನು ಹೊಂದುತ್ತಾಳೆ.

ಉತ್ತರಾರ್ಧದಲ್ಲಿ ದುರ್ಘಟನೆಗಳು ಮೇಲಿಂದ ಮೇಲೆ ಘಟಿಸುವುದು ಸ್ವಲ್ಪ ಜಾಸ್ತಿ ಎನ್ನಿಸಿದರೂ, ಕಾರಣಗಳು ಅತ್ಯಂತ ನೈಜವಾಗಿರುವುದರಿಂದ, ಹಾಗೂ ಕೆಲವೊಮ್ಮೆ ವಾಸ್ತವ ಕಲ್ಪನೆಗಿಂತಾ ಭೀಕರವಾಗಿರುವುದು ಸತ್ಯವಾದ್ದರಿಂದ ಅಸ್ವಾಭಾವಿಕವೆಂದೇನೂ ಅನ್ನಿಸುವುದಿಲ್ಲ.

ಮಹಿಳಾ ಪ್ರಧಾನ ಕಾದಂಬರಿಯ ಗುಂಪಿಗೇ “ನೆರಳು” ಅನ್ನು ಧಾರಾಳವಾಗಿ ಸೇರಿಸಬಹುದಾದರೂ, ಎಲ್ಲಾ ಪಾತ್ರಗಳ ಪೋಷಣೆಯೂ ಸೊಗಸಾಗಿ ಮೂಡಿ ಬಂದಿದೆ.

ನಮ್ಮ ಆಚಾರ, ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳು ಜೀವನವನ್ನು ಧೈರ್ಯದಿಂದ ಎದುರಿಸಲು ಪೂರಕವಾಗಿ ನಿಲ್ಲಬೇಕೇ ಹೊರತು, ಅದನ್ನು ಯಾವುದೇ ಕಾರಣಕ್ಕೂ ಕುಗ್ಗಿಸಲು ಬಿಡಬಾರದೆಂಬ ನೀತಿಪಾಠವನ್ನೂ ಶ್ರೀನಿವಾಸ ಜೋಯಿಸರ ಪಾತ್ರದ ಮುಖೇನ ಹೇಳಹೊರಟಿರುವ ನಿಮ್ಮ ಆಶಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ನಂಬಿಕೆಗೂ, ಮೂಢನಂಬಿಕೆಗೂ ಮಧ್ಯೆ ಇರುವ ತೆಳು ಗೆರೆಯನ್ನು ಗುರುತಿಸಲು ಸೋತ ಶ್ರೀನಿವಾಸ ಜೋಯಿಸರ ಪಾತ್ರ ದುರಂತ ಕಾಣುವುದು ಸಮಂಜಸವಾಗಿದೆ. ಈ ದೊಡ್ಡ ಹೊಡೆತವನ್ನೂ ಸಮರ್ಥವಾಗಿ ಎದುರಿಸಿ ಬಾಳಬಂಡಿಯನ್ನು ದಡದೆಡೆಗೆ ಕೊಂಡೊಯ್ಯುವಲ್ಲಿ ಗೆದ್ದ ಭಾಗ್ಯಳ ಪಾತ್ರ ಜೀವನದಲ್ಲಿ ಸ್ವಾರ್ಥರಹಿತ ಸಕಾರಾತ್ಮಕತೆಯ ಮಹತ್ವವನ್ನು ಬಿಂಬಿಸುವಲ್ಲಿ ಗೆದ್ದಿದೆ ಎಂಬುದು ಕಾದಂಬರಿ ಓದಿದ ನನ್ನ ಅನಿಸಿಕೆ.

ಓದುವ ಸುಖನೀಡಿದ ಕಾದಂಬರಿಯ ಕತೃವಾದ ಶ್ರೀಮತಿ. ನಾಗರತ್ನ ಮತ್ತು ಪ್ರಕಟಿಸಿದ “ಸುರಹೊನ್ನೆ” ಯ ಸಂಪಾದಕಿ ಶ್ರೀಮತಿ. ಹೇಮಮಾಲಾ, ಇದೋ ನಿಮಗೆ ಅಭಿನಂದನೆಗಳು.

-ಪದ್ಮಾ ಆನಂದ್, ಮೈಸೂರು

7 Comments on ““ನೆರಳು” ಧಾರವಾಹಿ : ನನ್ನ ಅನಿಸಿಕೆ

  1. ಸುರಹೊನ್ನೆ ಪತ್ರಿಕೆಯಲ್ಲಿ.. ಧಾರಾವಾಹಿಯಾಗಿ ..ಬರುತಿದ್ದ..ನೆರಳು..ಕಾದಂಬರಿಯ.. ಪ್ರತಿ ಕಂತಿಗೂ..ತಮ್ಮ.. ಪ್ರತಿಕ್ರಿಯೆ.. ತೋರಿಸುತ್ತಾ..ಪ್ರೋತ್ಸಾಹ.. ನೀಡುತ್ತಾ ಬಂದು.ಮುಕ್ತಾ ಯವಾದಮೇಲೂ..ಸೊಗಸಾಗಿ… ತಮ್ಮ.. ಅನಿಸಿಕೆ. ಅಭಿಪ್ರಾಯ ವನ್ನು..ಪಡಿಮೂಡಿಸಿ..ನನ್ನ..ಬರವಣಿಗೆ ಗೆ..ಸ್ಫೂರ್ತಿ.. ನೀಡಿರುವ…ಪದ್ಮಾ.. ಮೇಡಂ ಗೆ..ನನ್ನ.. ಹೃತ್ಪರ್ವಕ ಧನ್ಯವಾದಗಳು..

  2. ನಾಗರತ್ನ ಮೇಡಂ ಅವರ ನೆರಳು ಧಾರಾವಾಹಿಯ ಕುರಿತು ಪದ್ಮಾ ಮೇಡಂ ಅವರ ಸೊಗಸಾದ ವಿಶ್ಲೇಷಣಾತ್ಮಕ ನುಡಿಗಳು. ಚೆನ್ನೆನಿಸಿದವು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *