ದಿವ್ಯ ದೀಪಾವಳಿ
ಗಝಲ್
ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ
ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ
ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ
ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ
ಸುತ್ತು ಕವಿದಿದೆ ತಮೋ ರಜ ಗುಣಗಳ ಕಾವಳ
ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ
ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ
ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ
ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರಲಿ
ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ
–ಸುಜಾತಾ ರವೀಶ್
ಉತ್ತಮ.. ಸಂದೇಶ. ಹೊತ್ತ.. ಗಝಲ್…ವಂದನೆಗಳು… ಮೇಡಂ.
ದೀಪಾವಳಿಯ ವರ್ಣನೆ ಭವ್ಯವಾಗಿದೆ, ದಿವ್ಯವಾಗಿದೆ. ಚಂದದ ಗಝಲ್. ಅಭಿನಂದನೆಗಳು.
ಮೆಚ್ಚುಗೆಯ ನುಡಿಗಳಿಗೆ ಧನ್ಯೋಸ್ಮಿ ಮೇಡಂ
ಸುಜಾತಾ ರವೀಶ್
ಮೆಚ್ಚುಗೆಯ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್
ಸುಜಾತಾ ರವೀಶ್
ಸರಳ ಸುಂದರ
ಬೆಳಕಿನ ಹಬ್ಬಕ್ಕೆ ಸುಂದರ ಗಜಲ್