ಹೇಳುವುದು ಒಂದು ಮಾಡುವುದು ….
ಸತ್ಯಮೂರ್ತಿ ಕಾಲೇಜಿನಲ್ಲಿ ಉಪನ್ಯಾಸಕ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿಯ ಜಂಗಮವಾಣಿ (ಮೊಬೈಲು) ರಿಂಗಣಿಸಿತು.
.
ಅದನ್ನು ಕೇಳಿ ಸತ್ಯಮೂರ್ತಿಗೆ ಸಿಟ್ಟು ಬಂತು. ಮೊಬೈಲು ಇರಬೇಕು ಒಪ್ಪುತ್ತೇನೆ. ಅದರಿಂದ ಉಪಯೋಗ ಇದೆ. ಆದರೆ ಅದರಿಂದ ಅಷ್ಟೇ ಉಪದ್ರವೂ ಇದೆ. ನೀವು ತರಗತಿಯೊಳಗೆ ಬಂದಾಗ ಅದನ್ನು ಆಫ್ ಮಾಡಿಟ್ಟಿರಬೇಕು ಇಲ್ಲವೆ ಶಬ್ಧವಾಗದಂತೆ ನಿಶ್ಶಬ್ಧದಲ್ಲಿ ಇಟ್ಟಿರಬೇಕು.
.
ಈಗ ನೋಡಿ ಒಂದು ಜಂಗಮವಾಣಿ ಕಿರುಗುಟ್ಟಿದರೆ ಎಷ್ಟು ತೊಂದರೆಯಾಗುತ್ತದೆ ಎಂದು. ಇಡೀ ಕ್ಲಾಸೇ ಮುಜುಗರ ಅನುಭವಿಸಿತು. ಸಮಯವೂ ಹಾಳಾಯಿತು. ನನಗೆ ಪಾಠ ಮಾಡುವ ಏಕಾಗ್ರತೆ ಹೋಯಿತು. ನಿನ್ನ ಸಹಪಾಠಿಗಳ ಲಕ್ಷ್ಯ ಬೇರೆಡೆ ಹರಿಯಿತು. .. .. .. ಎಂದು ಭಾಷಣ ಬಿಗಿಯುತ್ತಿದ್ದಂತೆಯೇ ಸತ್ಯಮೂರ್ತಿಯ ಜಂಗಮವಾಣಿ ಕಿರಿಗುಟ್ಟತೊಡಗಿತು!
– ರುಕ್ಮಿಣಿಮಾಲಾ, ಮೈಸೂರು
ಇಂತಹ ಅನುಭವವು ನಮ್ಮ ತರಗತಿಯಲ್ಲಾಗಿತ್ತು. ಅದು ನೆನಪಿಗೆ ಬಂತು.. 🙂