ಇರಲಿ ಹೋರಾಟ
ಪಾಲಿಗೆ ಬಂದದ್ದು
ಪಂಚಾಮೃತ ದಿಟ
ಪಂಚಾಮೃತವನ್ನೇ
ಪಡೆಯಲು ಶ್ರಮಿಸಿ
ಅನವರತ
ಸೋಲು ಗೆಲುವು
ಅನಿಶ್ಚಿತ
ಹೋರಾಡದೇ
ಸೋಲುವುದು
ಅಪಮಾನ, ಅನುಚಿತ
ಹತ್ತಲಾಗದಿದ್ದಿರಬಹುದು
ಅಂದೊಮ್ಮೆ ಅಟ್ಟ
ಇಂದಿನ ಪ್ರಯತ್ನದಲ್ಲಿ
ಹತ್ತಲೂ ಬಹುದು ಬೆಟ್ಟ
ಒಂದಂತೂ ಸ್ಪಷ್ಟ
ಬಯಸಿದ ಮಾತ್ರಕ್ಕೆ
ಬಂದೊದಗದು ರಾಜ ಪಟ್ಟ
ಮುಖ್ಯ ಮನಸ್ಸಿಗೆ
ಇರಬೇಕು ಇಷ್ಟ
ಬಯಸಿದ್ದನ್ನು ಪಡೆಯಲು
ಆಗಲಾರದು ಕಷ್ಟ
–ನಟೇಶ
ಸರಳ ಸುಂದರ ಕವನ..ಧನ್ಯವಾದಗಳು ಸಾರ್.
Nice one
ಪ್ರಯತ್ನ ಪಟ್ಟರೆ ಫಲ… ಇಲ್ಲದಿದ್ದಲ್ಲಿ ಬಾಳು ವಿಫಲ! ಸೊಗಸಾದ ಸಂದೇಶ ಸಾರುವ ಕವನ.
ಹೌದು, ಬಯಸಿದ ಮಾತ್ರಕ್ಕೆಬಂದೊದಗದು ರಾಜ ಪಟ್ಟ!