ಹೂಗವಿತೆಗಳು-ಗುಚ್ಛ 8

Share Button

1
ತೊಟ್ಟು ಕಳಚಿದ ಮೇಲೆ
ಪರಿಮಳ ಜಾರುವುದು
ಹೂವಿನ ಜೊತೆಗೆ
ಗಿಡದಲ್ಲಿದ್ದುದು ಹೂವಷ್ಟೇ
ಪರಿಮಳ ಯಾವತ್ತೂ ಹೂವಿನದೇ..

2
ಕ್ಷಮಿಸಿ ಹೂಗಳೇ
ನಿಮ್ಮನ್ನು ಕೊಲ್ಲುತ್ತೇನೆ
ದೇವರನ್ನು ಮೆಚ್ಚಿಸಲು

3
ದಿನವೆಲ್ಲ ಪರಿಮಳದ
ಹೂವರಳಿಸುವ ಮರ
ಹುಣ್ಣಿಮೆಯ ರಾತ್ರಿಗೆ
ಬೆಳಕಿನ ಹೂ ಮುಡಿದಿದೆ!

4
ಇದು ಹೂವಿನ ಪಕಳೆಯೋ
ಚಿಟ್ಟೆಯ ರೆಕ್ಕೆಯೋ ಗೊಂದಲ
ಎರಡರಲ್ಲೂ ಒಂದೇ ಬಣ್ಣ

5
ಬೇವಿನ ಕೊಂಬೆಯಲ್ಲಿ
ಜೇನುಹುಳು
ಅದೇನು ಮಾಡುತ್ತಿದೆ?
ಹಲವು ಹೂಗಳಿಂದ
ಚೆಲುವ ತಂದು
ಕವಿತೆ ಕಟ್ಟುತ್ತಿದೆ!

6
ಹೂದೋಟದ ತುಂಬಾ
ಅರಳಿ ನಿಂತಿವೆ
ಎಷ್ಟೊಂದು ಹೂಗಳು
ಇಷ್ಟೊಂದು ಹನಿಗವಿತೆಗಳ
ಅದು ಯಾವ ಮಾಯದಲ್ಲೋ
ಬರೆದು ಹೋಗಿದ್ದಾನೆ ದೇವರು!

(ಮುಗಿಯಿತು)

ನವೀನ್ ಮಧುಗಿರಿ

4 Responses

  1. ಮಹೇಶ್ವರಿ ಯು says:

    ತಿಳಿಯಾಗಿ ನಗುವ ನಿಮ್ಮ ಹೂಗವಿತೆಗಳು ಮುಗ್ಧ ಮಧುರ ಮತ್ತು ಮೋಹಕ

  2. ಬಹಳ… ಅರ್ಥ ಪೂರ್ಣ ವಾದ…ಕವಿತೆಗಳು..ಹಾಗೂ..ಮುದಕೊಟ್ಟ….
    ಹನಿಗವನಗಳನ್ನು..ಕೊಟ್ಟ ನಿಮಗೆ ಧನ್ಯವಾದಗಳು ಸಾರ್…

  3. ನಯನ ಬಜಕೂಡ್ಲು says:

    Beautiful

  4. ಸುಂದರವಾದ ಅರ್ಥಗರ್ಭಿತವಾದ ಹೂವಿನಂತೆ ಕುಸುಮಕೋಮಲವಾದ ಕವಿತೆಗಳು ವಂದನೆಗಳು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: