ಹೂಗವಿತೆಗಳು-ಗುಚ್ಛ 4
1
ಹಿತ್ತಲಲ್ಲಿ ಹೂ ಅರಳಿವೆ
ಕಣ್ಣಿಗೆ ಕಾಣದ ಗಾಳಿ
ಕಣ್ಣಿಗೆ ಕಾಣದ
ಸಾಕ್ಷಿ ತಂದಿದೆ
2
ಹಾರಲಾರದ ಚಿಟ್ಟೆ
ಬಾಡಲಾರದ ಹೂವು
ರೆಕ್ಕೆ ಒಣಗಿಸುತ್ತಿವೆ
ಅಮ್ಮ ಶುಭ್ರ ಮಾಡಿರುವಳು
ಕೂಸಿನ ಬಟ್ಟೆ
3
ಅಗೋ ಹೊರಟಿದ್ದಾನೆ ನೇಸರ
ಪಶ್ಚಿಮದ ಕಡೆ
ಸೂರ್ಯಕಾಂತಿಯ ಹೊಲ
ಕತ್ತು ತಿರುಗಿಸುತ್ತಿದೆ ಮೆಲ್ಲನೆ!
4
ಆಹಾ! ಎಷ್ಟು ಚೆಂದ
ಈ ಕೊಳದ ಹೊಕ್ಕಳು
ಹುಣ್ಣಿಮೆಯ ರಾತ್ರಿಯಲ್ಲಿ ಅರಳುತಿದೆ
ನಸುಗೆಂಪು ಬಣ್ಣದ ತಾವರೆ ಹೂವು
5
ಹೂ ಕಿತ್ತ ಗಿಡ
ಮತ್ತೆ ಚಿಗುರುತ್ತದೆ
ಗಾಯವನ್ನು ವಾಸಿ ಮಾಡಿಕೊಳ್ಳಲು
6
ಹೂ ಮುಡಿದವಳಿಗೆ ಗೊತ್ತಿಲ್ಲ
ಹೂವು ಮುಡಿದಿದೆ
ಬಣ್ಣ, ಪರಿಮಳ
––ನವೀನ್ ಮಧುಗಿರಿ
ಚಂದದ ಹನಿಗವನಗಳು
ಸೂಪರ್ ಸಾರ್… ಮುದ ಕೊಡುವ ಹನಿಗವನಗಳು.
ಕವನ ಬರೆದವರಿಗೆ ಗೊತ್ತಿಲ್ಲ
ಕವನ ನೀಡಿದೆ ನೆಮ್ಮದಿ ತೃಪ್ತಿ ಓದುಗರಿಗೆ
ವಂದನೆಗಳು
ಸೊಗಸಾದ ಕವನ ಗುಚ್ಛ
ಸೊಗಸಾಗಿದೆ