ಹೂಗವಿತೆಗಳು-ಗುಚ್ಛ 3
1.
ದೇವರಿಗಾಗಿಯೇ
ಅರಳುವ ಹೂವಿನಂತೆ
ನಿನ್ನನ್ನೇ ನೆನಪಿಸಿಕೊಳ್ಳುವೆ
2.
ಕೊಂಬೆಗಳ ಇಕ್ಕಟ್ಟು
ಸಿಕ್ಕಷ್ಟೇ ಜಾಗದಲ್ಲಿ
ಅರಳಿ ನಗುತ್ತಿದೆ ಹೂವು
3.
ಅವಳ ನಾಸಿಕದಂತಿರುವ
ಸಂಪಿಗೆಯ ಮೇಲೆ
ಒಂಟಿ ಇಬ್ಬನಿ!
4.
ಸಿರಿವಂತರ ಆಭರಣ
ಮುತ್ತು ರತ್ನ ವಜ್ರ ಬಂಗಾರ
ಬಡವರ ಒಡವೆ
ಪರಿಮಳ ಭರಿತ ಈ ಹೂವೆ!
5.
ತಲೆ ಮೇಲೆತ್ತಲಾಗದ ಹೂವು
ಚಂದಿರನ ನೋಡುತ್ತಿದೆ ಬಾಗಿ
ಶುಭ್ರವಾದ ಕೊಳದಲ್ಲಿ
6.
ಚಿಟ್ಟೆಯೊಂದು ಹಾರಿದೆ
ಹೂವಿಂದ ಹೂವಿಗೆ
ತೋಟಕ್ಕೆ ಬೇಲಿ ಕಟ್ಟುವ
ನಾನೆಂಥ ಮೂರ್ಖ ಮಾಲೀಕ
–ನವೀನ್ ಮಧುಗಿರಿ
ಸೊಗಸಾಗಿದೆ.
ಅರ್ಥಪೂರ್ಣ ವಾದ..ಹನಿಗವನಗಳು…ಚೆನ್ನಾಗಿವೆ..ಧನ್ಯವಾದಗಳು ಸಾರ್.
Beautiful
ಸೊಗಸಾದ ಕವನ…ಸಂಪಿಗೆ ಹೂವಿಗಾಗಿ!