ರಕ್ಷಾಬಂಧನ
ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋ
ತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ
ಬಂದೆವು ಈ ಭುವಿಗೆ ಏಕಾಂಗಿಯಾಗಿ
ಹೋಗುವೆವು ನಾವು ಏಕಾಂಗಿಯಾಗಿ
ಇರುವ ಕಾಲದಿ ಇರಲಿ ಒಂದು ಬಂಧವು
ಸಹೋದರತೆಯ ನಮ್ಮ ಬಾಳು ಚಂದವೋ
ಬಾಲ್ಯದಲಿ ಜಗಳವಾಡುತ ಕೂಡಿ ಬೆಳೆದೆವು
ಯವ್ವನದಲ್ಲಿ ಕಷ್ಟಗಳನ್ನು ಹಂಚಿ ಬೆಳೆದೆವು
ರಕ್ತ ಒಂದೇ ನಮ್ಮದೆಲ್ಲಾ ರಕ್ಷೆ ಒಂದೇ ಬೇಕು
ಬಂಧನದ ಕೊಂಡಿಯದೋ ರಕ್ಷಾ ಬಂಧನವೋ
ಅಣ್ಣಾ ನನ್ನ ಕಾಯೋ ಎಂದು
ಪ್ರೀತಿಯಿಂದ ರಾಖಿ ತಂದು
ಕಟ್ಟಿ ಸಣ್ಣ ಉಡುಗೊರೆ ಕೇಳೋ ತಂಗಿಗದುವೇ ಹಬ್ಬವೋ
ತಂಗಿಯ ಕಣ್ಣಲ್ಲಿ ಪ್ರೀತಿ ಕಂಡ ಅಣ್ಣಗದೇ ಸ್ವರ್ಗವೋ
ಪ್ರೀತಿಗಿಂತ ಬೇರೆ ಏನೂ ಇರದು ಉಡುಗೊರೆ
ಕಷ್ಟ ಸುಖದಿ ಪಾಲು ಪಡೆವ ನಾವು
ಕರೆದು ಪ್ರೀತಿಯಲಿ ರಾಖಿ ಕಟ್ಟುವ
ರಕ್ಷಾ ಬಂಧನದಿ ಬಂಧಿಗಳಾಗುವ
ನನ್ನೆಲ್ಲಾ ಸಹೋದರ ಸಹೋದರಿಯರಿಗೆ
ರಕ್ಷಾ ಬಂಧನ ಹಬ್ಬದ ನಲುಮೆಯ ಶುಭಾಶಯಗಳು
-ಪ್ರಜ್ವಲ್ ಪೂಜಾರಿ, ಮಂಗಳೂರು
ಮನಮುಟ್ಟುವ… ಸೋದರಿಕೆಯ ಅನುಬಂಧವನ್ನು ಕವನದ ಮೂಲಕ ಅನಾವರಣಗೊಳಿಸಿರುವ…ರೀತಿ.. ಮುದ ತಂದಿತು…ಸಾರ್ ಧನ್ಯವಾದಗಳು.
ಚಂದದ ಕವನ
So nice loved it
ತುಂಬ ಸುಂದರವಾಗಿದೆ ಕವಿತೆ. ಸಹೋದರತ್ವದ ಭಾವ ಸೊಗಸಾಗಿ ಅನಾವರಣ ಗೊಂಡಿದೆ
ಸೋದರ ಸೋದರಿಯರ ಪವಿತ್ರ ಸಂಬಂಧವನ್ನು
ಅನಾವರಣಗೊಳಿಸಿದ ಭಾವಪೂರ್ಣ ಕವನ.
Very nice poem.