ಹೂಗವಿತೆಗಳು-ಗುಚ್ಛ 1

Share Button

1
ಕಲ್ಲಿನ ಮೇಲಷ್ಟೇ
ಕತ್ತಿಯನ್ನು ಮಸೆಯಬಹುದು
ಹೂವಿನ ಮೇಲಲ್ಲ..
ಹೂವಿನ ಮೇಲಷ್ಟೇ
ದುಂಬಿಯು ಕೂರುವುದು
ಕತ್ತಿಯ ಮೇಲಲ್ಲ..

2
ನಾನು ಕೊಟ್ಟ
ಉಡುಗೊರೆಯ ಹೂವು
ಅವಳ ಕಣ್ಣುಗಳಲ್ಲಿ
ಅರಳುತ್ತಿದೆ!

3
ಮನೆಯಲ್ಲಿ ನಾನು ಬೈದರೆ ಸಾಕು
ಮುನಿಸಿಕೊಳ್ಳುವ
ಹೆಂಡತಿ ಮಗಳು
ಹಿತ್ತಲಲ್ಲಿ ನಾನು ಹೂ ಕಿತ್ತರೂ
ಕೋಪಿಸಿಕೊಳ್ಳದ ಗಿಡ
ಮರುದಿನ ಮತ್ತಷ್ಟು ಹೂಗಳು

4
ಹೂವನ್ನು ಸ್ಪರ್ಶಿಸಿದ ನಂತರ
ಬೆರಳಿಗಂಟುವ ಪರಿಮಳದಂತೆ
ನಿನ್ನ ನೆನಪು ಹೃದಯಕಂಟಿದೆ

5
ಆಗಾಗ ಅರಳುವ
ನನ್ನ ಕನಸಿನ ಹೂವುಗಳನ್ನ
ನಿನ್ನ ಮನಸಿಗೆ ಮುಡಿಸಬೇಕು

-ನವೀನ್ ಮಧುಗಿರಿ

6 Responses

  1. ಮಹೇಶ್ವರಿ ಯು says:

    ಹೂಗವಿತೆಗಳು ಹೂವಿನ ಷ್ಟೇ ನಾಜೂಕು ಮತ್ತು ಮನೋಹರ

  2. ಸರಳ..ಸುಂದರ ಕವನ…ಧನ್ಯವಾದಗಳು ಸಾರ್

  3. . ಶಂಕರಿ ಶರ್ಮ says:

    ಹೂವಿನ ಕೋಮಲತೆ ಚಂದದ ಕವನದಲ್ಲಿ ಮೂಡಿಬಂದಿದೆ.

  4. ಹೂಗವಿತೆಗಳನ್ನು ಸುಂದರವಾಗಿ, ಮನಮುಟ್ಟುವಂತೆ ಹೆಣೆಯಲಾಗಿದೆ

  5. B C Narayana murthy says:

    ಕೋಮಲ ಮನಸಿನಿಂದ ಮೂಡಿದ
    ಹೂಗವನ ಸೊಗಸಾಗಿದೆ

  6. ನಯನ ಬಜಕೂಡ್ಲು says:

    Beautiful

Leave a Reply to ಮಹೇಶ್ವರಿ ಯು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: