ಹೂಗವಿತೆಗಳು-ಗುಚ್ಛ 1
1
ಕಲ್ಲಿನ ಮೇಲಷ್ಟೇ
ಕತ್ತಿಯನ್ನು ಮಸೆಯಬಹುದು
ಹೂವಿನ ಮೇಲಲ್ಲ..
ಹೂವಿನ ಮೇಲಷ್ಟೇ
ದುಂಬಿಯು ಕೂರುವುದು
ಕತ್ತಿಯ ಮೇಲಲ್ಲ..
2
ನಾನು ಕೊಟ್ಟ
ಉಡುಗೊರೆಯ ಹೂವು
ಅವಳ ಕಣ್ಣುಗಳಲ್ಲಿ
ಅರಳುತ್ತಿದೆ!
3
ಮನೆಯಲ್ಲಿ ನಾನು ಬೈದರೆ ಸಾಕು
ಮುನಿಸಿಕೊಳ್ಳುವ
ಹೆಂಡತಿ ಮಗಳು
ಹಿತ್ತಲಲ್ಲಿ ನಾನು ಹೂ ಕಿತ್ತರೂ
ಕೋಪಿಸಿಕೊಳ್ಳದ ಗಿಡ
ಮರುದಿನ ಮತ್ತಷ್ಟು ಹೂಗಳು
4
ಹೂವನ್ನು ಸ್ಪರ್ಶಿಸಿದ ನಂತರ
ಬೆರಳಿಗಂಟುವ ಪರಿಮಳದಂತೆ
ನಿನ್ನ ನೆನಪು ಹೃದಯಕಂಟಿದೆ
5
ಆಗಾಗ ಅರಳುವ
ನನ್ನ ಕನಸಿನ ಹೂವುಗಳನ್ನ
ನಿನ್ನ ಮನಸಿಗೆ ಮುಡಿಸಬೇಕು
-ನವೀನ್ ಮಧುಗಿರಿ
ಹೂಗವಿತೆಗಳು ಹೂವಿನ ಷ್ಟೇ ನಾಜೂಕು ಮತ್ತು ಮನೋಹರ
ಸರಳ..ಸುಂದರ ಕವನ…ಧನ್ಯವಾದಗಳು ಸಾರ್
ಹೂವಿನ ಕೋಮಲತೆ ಚಂದದ ಕವನದಲ್ಲಿ ಮೂಡಿಬಂದಿದೆ.
ಹೂಗವಿತೆಗಳನ್ನು ಸುಂದರವಾಗಿ, ಮನಮುಟ್ಟುವಂತೆ ಹೆಣೆಯಲಾಗಿದೆ
ಕೋಮಲ ಮನಸಿನಿಂದ ಮೂಡಿದ
ಹೂಗವನ ಸೊಗಸಾಗಿದೆ
Beautiful