‘ದೋಸೆ…ಸವಿಯುವಾಸೆ’
ಏನು ಮೋಡಿ ಮಾಡಿದಿಯೋ ದೋಸೆ,
ಎಲ್ಲರಲೂ ಮೂಡಿದೆ ನಿನ್ನ ಸವಿಯಬೇಕೆಂಬ ಆಸೆ,
ಬೆಣ್ಣೆ ತುಪ್ಪ ಸವರಿದ ನೀನೆಂದರೆ ಎಲ್ಲರಿಗೂ ಅಚ್ಚುಮೆಚ್ಚು
ನಿನ್ನ ಸವಿದು ವಾಟ್ಸಪ್ಪಲಿ/ಫೇಸಬುಕ್ಕಲಿ ಚಿತ್ರ ತೆಗೆದುಕಳಿಸಿ
ಹೆಚ್ಚಿಸುತಿಹರು ನಿನ್ನ ವರ್ಚಸ್ಸು,
ಸೆಟ್ಟು, ಮಸಾಲೆ, ಖಾಲಿ, ತುಪ್ಪಾ ಬೆಣ್ಣೆ, ಪೇಪರ್, ನೀರು ಹೀಗೆ
ವಿವಿಧ ರೂಪಗಳಿಂದ ಕಂಗೊಳಿಸುತಿಹೆ ಎಲ್ಲೆಲ್ಲೂ,
ರಜೆ ಇದ್ದಾಗಲೊಮ್ಮೆ ನಿನ್ನ ರುಚಿ ಸವಿಯುವದೇ ಒಂದು ಸ್ಪೆಶಲ್ಲು.
ಮಾವಳ್ಳಿ, ಮೈಲಾರಿ ಕೊಟ್ಟೂರೇಶ್ವರ,ದ್ವಾರಕಾ, ವಿದ್ಯಾರ್ಥಿ
ಮುಂತಾದವರಿಗೆ ಹೆಸರು ತಂದಿದ್ದೇ ನೀನು,
ಆಗಿರುವೆ ನೀ ಅವರಿಗೆ ಕಲಿಯುಗದ ಕಾಮಧೇನು
ದಾವಣಗೆರೆಗೆ ಬಂದರೆ ನಿನ್ನ ಬೆಣ್ಣೆ ಅಲಂಕಾರದ ರೂಪ
ನೆನಪಾಗಿ ಮೂಡುವದು ಮಧುರ ಭಾವನೆ..
ಧಾರವಾಡದ ‘ಬಾಂಬೆ’ಗೆ ಬಂದರೆ ತುಪ್ಪ ಸವರಿದ
ನಿನ್ನ ಸವಿ ಮೂಡಿಸುವದೆಮಗೆ ಹೊಸ ಚೇತನವನ್ನೆ!..
ಅಬಾಲವೃದ್ಧರಾದಿಯಾಗಿ ನೀ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು
ಕೆಲ ತಿಂಡಿಗಳು ನಿನ್ನ ಜನಪ್ರಿಯತೆ ಕಂಡು ಪಡುತಿವೆ ಹೊಟ್ಟೆ ಕಿಚ್ಚು!
-ಮಾಲತೇಶ ಎಂ ಹುಬ್ಬಳ್ಳಿ
ದೋಸೆ ಕವಿತೆ ಬಾಯಲ್ಲಿ ನೀರೂರಿಸುವಂತಿದೆ…ಧನ್ಯವಾದಗಳು ಸಾರ್
ವೆರೈಟಿ ದೋಸೆ ಬಾಯಲ್ಲಿ ನೀರೂರಿಸಿತು. ಸೊಗಸಾಗಿದೆ ಸರ್ ಕವನ.
ಧನ್ಯವಾದಗಳು ಮೇಡಮ್
ಎಲ್ಲರ ಬಾಯಲ್ಲಿ ನೀರೂರಿಸುತ್ತಾ ದೋಸೆಗಳ ಮೆರವಣಿಗೆಯೇ ನಡೆಯಿತು ನೋಡಿ… ಚಂದದ ಕವನ.
“ದೋಸೆ, ದೋಸೆ ತಿನ್ನಲು ಆಸೆ” ಎಂದು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಮೆಚ್ಚಿನ ಕವಿತೆಯನ್ನು ನೆನಪಿಸುತ್ತಾ ಬಾಯಲ್ಲಿ ನೀರೂರಿತು.
ನೀರೂರಿತು ಓದುತ ದೊಸೆಯ ಕವನವ/
ಆಸೆಯಾಯಿತು ಸವಿಯಲು ಈ ಕ್ಷಣವೇ/
ನೀರೂರಿತು ಓದುತ ದೊಸೆಯ ಕವನವ/
ಅಪೇಕ್ಷೆಯಾಯಿತು ಉಣಲು ಈ ನಿಮಷವೇ/
ವಿಶದತೆಯಲಿ ವಿವರಿಸಿರುವಿರಿ ವಿಸ್ತಾರದಲಿ/
ಸ್ಪಷ್ಟತೆಯಲಿ ಬಣ್ಣಿಸಿರುವಿರಿ ವರ್ಣಮಯದಲಿ/
ವರ್ಣಿಸಿರುವಿರಿ ದೋಸೆಯನು ವಾಸ್ತವಿಕತೆಯಲಿ/
ನಿರೂಪಿಸಿರುವಿರಿ ವಿಶೇಷಕಗಳ ಯಥಾರ್ಥದಲಿ/
ಸತ್ಯತೆಯಲಿ ರೂಪಿಸಿರುವಿರಿ ದೋಸೆಯ ಸಂಪನ್ನತೆಯ/
ಓದುಗರಿಗೆ ಉತ್ತೇಜಿಸಿರುವಿರಿ ಸವಿಯುವ ಹಾತೊರೆಯ/
ವೈವಿದ್ಯತೆಯಲ್ಲಿ ಹೆಣೆದಿರುವಿರಿ ದೋಸೆಯ ಸಿರಿವಂತಿಕೆಯ/
ರಸಿಕರಿಗೆ ಉದ್ರೇಕಿಸಿರುವಿರಿ ರುಚಿಸುವ ಹಂಬಲಿಕೆಯ /