ಮನೆಗೊಬ್ಬ ಕವಯತ್ರಿ…
ಸತ್ಯವಾಗಿಯೂ
ಸಹಜವಾಗಿಯೂ
ಪ್ರತಿ ಹೆಣ್ಣು
ಒಬ್ಬ ಕವಯತ್ರಿಯೇ,,,,
ಒಬ್ಬಳು ಬಗೆಬಗೆಯ
ಅಡುಗೆಯ ಸ್ವಾದಗಳಲ್ಲಿ
ತನ್ನ ಭಾವ ಬೆರೆಸುತ್ತಾ
ರುಚಿಗಳ ಮೂಲಕ
ಕವನಗಳ ಬರೆಯತ್ತಾಳೆ,
ಮತ್ತೊಬ್ಬಳು
ಬಣ್ಣಬಣ್ಣಗಳ ದಾರ
ಮಣಿಗಳಲ್ಲಿ ಭಾವಗಳ ಬೆರೆಸುತ್ತಾ
ಕಸೂತಿಯ ಕಲೆಗಳ ಚಿತ್ತಾರದಿ
ಕವನಗಳ ಬಿಡಿಸುತ್ತಾಳೆ,
ಇನ್ನೂಬ್ಬಳು
ಮಣ್ಣನ್ನು ಹದಗೊಳಿಸಿ
ಭಾವಗಳ ಬೀಜ ಬಿತ್ತಿ
ಪುಷ್ಷಗಳ ಚೆಲ್ವಿಕೆಯಲ್ಲಿ
ಕವನಗಳ ಅರಳಿಸುತ್ತಾಳೆ,
ಮನೆ ಮನೆಯ ಮುಂದೆ
ಬಿಟ್ಟಿರುವ ಚುಕ್ಕಿಗಳಲ್ಲಿ
ಸೇರಿಸಿ ಎಳೆದಿರುವ ಗೆರೆಗಳಲ್ಲಿ
ಕವನಗಳು ಬಣ್ಣ ತುಂಬಿಕೊಂಡು
ರಂಗು ರಂಗಿನ ರಂಗೋಲಿಗಳಾಗಿರುತ್ತವೆ,
ಕವಿಗಳೆಂದು ಕರೆಯಿಸಿಕೊಳ್ಳುವ
ನಾವು-ಅಕ್ಷರಗಳ ಜೋಡಿಸಿ
ನಮ್ಮಂಥವರೆಲ್ಲರ – ಭಾವಗಳ ಸೇರಿಸಿ
ಪದಗಳ ಪೋಣಿಸಿ
ಕವನ ಕಟ್ಟುತ್ತೇವೆ,ಬರೆಯುತ್ತೇವೆ
ಬರೆಯುತ್ತಲೇ ಇರುತ್ತೇವೆ ಅಷ್ಟೇ
ಇದ್ದಾಳಲ್ಲವೇ ,,,,,
ಮನೆಗೊಬ್ಬ ಕವಯತ್ರಿ.
-ವಿದ್ಯಾ ವೆಂಕಟೇಶ್. ಮೈಸೂರು
ಸುಂದರ ಪರಿಕಲ್ಪನೆಯ ಮನೆ ಮನೆಯ ಕವಿಯತ್ರಿಯರು ಲಾಲಿತ್ಯದಿಂದಿಡಗೂಡಿ ಸೊಗಸಾಗಿದ್ದಾರೆ. ಅಭಿನಂದನೆಗಳು ಸೋದರಿ ವಿದ್ಯಾ ಅವರೆ.
ಹೌದು ಸಹೋದರಿ ನಿನ್ನ ಮಾತು ಸತ್ಯಸ್ಥಸತ್ಯ..ನೋಡುವ ಸಹೃದಯತೆ ಇರಬೇಕು ಅಷ್ಟೇ.
ಸರಳ ಸುಂದರ ವಾಗಿದೆ ಕವಿತೆ ಅಭಿನಂದನೆಗಳು
ಸುಂದರವಾದ ರಚನೆ
ಸುಂದರವಾದ ಕವನ
ತುಂಬಾ ಸೊಗಸಾಗಿದೆ
ಮನೆ ಮನೆಗಳಲ್ಲಿ ಕವಯಿತ್ರಿಗಳು ಮಾತ್ರವಲ್ಲ…ಸಕಲಕಲಾ ವಲ್ಲಭೆಯರಿದ್ದಾರೆ! ಚಂದದ ಕವನ… ಧನ್ಯವಾದಗಳು ಮೇಡಂ.
ಎಲ್ಲರ ಮೆಚ್ಚುಗೆಗೆ ಅಭಿವಂದನೆಗಳು
ಪರಿಕಲ್ಪನೆ ಸುಂದರವಾಗಿದೆ