ಎನ್.ಎಸ್.ವಾಮನ್ ಶತಮಾನೋತ್ಸವ: ಪುಸ್ತಕ ಪ್ರಶಸ್ತಿ ವಿಜೇತರು
ಮೈಸೂರಿನ, ಅನುಭವಗಳ ಹಂಚಿಕೆಯ ವೇದಿಕೆಯಾದ ‘ಅಭಿರುಚಿ ಬಳಗ‘ ಹಾಗೂ ‘ಆಸಕ್ತಿ ಪ್ರಕಾಶನ‘ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2022 ರ ಜನವರಿ 2 ರಂದು ಭಾನುವಾರ ಎನ್.ಎಸ್.ವಾಮನ್ ಅವರ ಬಗ್ಗೆ ವಿಚಾರ ಸಂಕಿರಣ, ವಸ್ತುಪ್ರದರ್ಶನ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ರಾಜ್ಯದ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮೈಸೂರಿನ ಚೈತ್ರ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಈ ಹಿಂದೆ ‘ಅಭಿರುಚಿ ಬಳಗ’ ಹಾಗೂ ‘ಆಸಕ್ತಿ ಪ್ರಕಾಶನ’ಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಈ ಪುಸ್ತಕ ಪ್ರಶಸ್ತಿ ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ 46 ಪುಸ್ತಕಗಳು ಬಂದಿದ್ದವು. ಅವುಗಳಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿರುವ ಪುಸ್ತಕಗಳು, ಲೇಖಕರು ಹಾಗೂ ಬಹುಮಾನದ ವಿವರಗಳು ಹೀಗಿವೆ. ಮೊದಲ, ಎರಡನೇ ಹಾಗೂ ಮೂರನೇ ಬಹುಮಾನವನ್ನು ತಲಾ ಮೂರು ಜನರಿಗೆ ಹಂಚಲಾಗಿದೆ.
ಮೊದಲ ಬಹುಮಾನ ವಿಜೇತರು:-
-ಕಾರವಾರ ಜಿಲ್ಲೆ ಕೈಗಾದ ಎ.ಎನ್.ರಮೇಶ್ ಗುಬ್ಬಿ ಅವರ ‘ಕಾಡುವ ಕವಿತೆಗಳು’ ಎಂಬ ಕವನ ಸಂಕಲನ.
-ಬೆಂಗಳೂರಿನ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ವಂದೇ ಗುರು ಪರಂಪರಾಮ್‘ ಗುರುವಿನ ಬಗೆಗಿನ ಲೇಖನಗಳ ಸಂಕಲನ.
-ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನ ಲಕ್ಷ್ಮೀಕಾಂತ್ ಮಿರಜಕರ್ ಅವರ ‘ಗಝಲ್‌ಗಳು‘ ಗಝಲ್‌ಗಳ ಸಂಕಲನ.
ಎರಡನೇ ಬಹುಮಾನ ವಿಜೇತರು:
-ಮುಂಬಯಿಯ ಡಾ. ಕೊ.ಗೋವಿಂದ ಭಟ್ ಅವರ ‘ನೆಲಸಂಪಿಗೆ‘ ಕಥಾ ಸಂಕಲನ.
-ನಂಜನಗೂಡಿನ ಡಾ. ಸೌಗಂಧಿಕಾ ಜೋಯಿಸ್ ಅವರ ‘ಪುನ್ನಾಗ‘ ಕವನ ಸಂಕಲನ.
-ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಂಜುನಾಥ ಬನಸೀಹಳ್ಳಿ ಅವರ ‘ಸ್ನೇಹ ಬಂಧನ’ ಕಾದಂಬರಿ.
ಮೂರನೇ ಬಹುಮಾನ ವಿಜೇತರು :
-ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಸಹನಾ ಕಾಂತ ಬೈಲು ಅವರ ‘ಆನೆ ಸಾಕಲು ಹೊರಟವಳು’ ಅಂಕಣ ಸಂಕಲನ.
-ಹಾವೇರಿಯ ಮಾಲತೇಶ ಅಂಗೂರ ಅವರ ‘ಹಾವೇರಿಯಾಂವ್‘ ಅಂಕಣ ಬರಹಗಳ ಸಂಕಲನ.
-ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೀರೇಕುಂಬಳಗುಂಟೆ ಗ್ರಾಮದ ಎಸ್.ಹೆಚ್.ಶಫಿಉಲ್ಲ (ಕುಟೇಶ) ಅವರ ‘ಸಂಧ್ಯಾ ರಗಳೆ’ ಕಥಾ ಸಂಕಲನ.
ವಿಶೇಷ ಬಹುಮಾನ ವಿಜೇತರು:
-ಶೆಲ್ಲಿ ಕೂಡ್ಲಿಗಿ (ಶೇಕ್ಕಾವಲಿ ಮಣಿಗಾರ್) ಅವರ ‘ಎರಡು ಲೋಟದ ಹುಡುಗಿ‘ ಕಾದಂಬರಿ.
-ಬೆಂಗಳೂರಿನ ಪ್ರಭಾಕರ ಬಿಳ್ಳೂರ್ ಅವರ ‘ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು‘ ಕವಿತಾ ಸಂಕಲನ.
-ವಿಜಯಪುರದ ಪ್ರೊ. ಗಿರಿಜಾ ಮಾಲೀಪಾಟೀಲ್ ಅವರ ‘ಸಾಹಿತ್ಯದ ವೈವಿಧ್ಯಮಯ ರೂಪಗಳು’ ಲೇಖನಗಳ ಸಂಗ್ರಹ. -ಮೈಸೂರಿನ ಶ್ರೀಮತಿ. ಯಶೋಧ ರಾಮಕೃಷ್ಣ ಅವರ ‘ಅರಿವಿನ ಸೌರಭ‘ ಲೇಖನಗಳ ಸಂಕಲನ.
-ಬಾದಾಮಿಯ ಸದಾಶಿವ ಎಂ.ಮರಡಿ ಹಾಗೂ ಜಮಖಂಡಿಯ ಹಿರೇನಸಬಿ ಮಲ್ಲಿಕಾರ್ಜುನ ಮುತ್ತಪ್ಪ ಮರಡಿ ಅವರ ‘ಸಮ ಹಿಮ ಚಂದ್ರಮ’ ಕವನ ಸಂಕಲನ.
-ಕೊಪ್ಪಳ ಜಿಲ್ಲೆ ಗಂಗಾವತಿಯ ರಾಘವೇಂದ್ರ ಮಂಗಳೂರು ಅವರ ‘ಲಾಟರಿ ಹುಡುಗ‘ ಕಥಾ ಸಂಕಲನ.
ಸಮಾಧಾನಕರ ಬಹುಮಾನ ವಿಜೇತರು :
-ದಾವಣಗೆರೆ ಜಿಲ್ಲೆಯ ಜೆ.ಎಸ್.ಚಂದ್ರನಾಥ ನೀಲನಹಳ್ಳಿ ಅವರ ‘ಕರ್ನಾಟಕದ ದಿಗಂಬರ ಜಿನಾಲಯಗಳು‘ ಸಂಶೋಧನಾ ಕೃತಿ.
-ಬಾಗಲಕೋಟೆಯ ಬದರಿನಾಥ್ ಜಹಗೀರದಾರ್ ಅವರ ‘ಸರಿಯಾವುದು ಎಂದಾರಿಸು ಮನವೇ….’ ಕವನ ಸಂಕಲನ. -ಹಾಸನದ ಕುಮಾರ ಛಲವಾದಿ ಅವರ ‘ಏಕಾಂಗಿಯ ಹಾಡು’ ಕವಿತಾ ಸಂಕಲನ.
-ಶಿರಸಿಯ ಸಿಂಧು ಚಂದ್ರ ಹೆಗಡೆಯವರ ‘ಸೂಜು ಮೆಣಸು ಕೆಸುವಿನೆಲೆ’ ಕವನ ಸಂಕಲನ.
-ಮಂಡ್ಯ ತಾಲೂಕು ಹನಕೆರೆಯ ಮಹೇಶಕುಮಾರ ಹನಕೆರೆ ಅವರ ‘ಒಡಲಾಳದ ಪ್ರಶ್ನೆಗಳು’ ಕವನ ಸಂಕಲನ.
-ಮೈಸೂರು ಜಿಲ್ಲೆ, ಹುಣಸೂರು ತಾಲೂಕು, ಮನುಗನಹಳ್ಳಿಯ ಎಂ.ಇಂದಿರಾ ಶೆಟ್ಟಿ ಅವರ ‘ಭಾವಚಿತ್ತಾರ‘ ಕವನ ಸಂಕಲನ. -ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕನಸೂರಿನ ಯಶಸ್ವಿನಿ ಮೂರ್ತಿ ಅವರ ‘ರಾಗ ರಂಗೋಲಿ‘ ಕವನ ಸಂಕಲನ.
ಈ ಎಲ್ಲಾ ಬಹುಮಾನ ವಿಜೇತರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು.
–ಎನ್.ವ್ಹಿ.ರಮೇಶ್, ಸಂಸ್ಥಾಪಕ ಅಧ್ಯಕ್ಷರು
ಎಲ್ಲ ವಿಜೇತರಿಗೂ ಅಭಿನಂದನೆಗಳು
ಎಲ್ಲ ವಿಜೇತರಿಗೆ ಅಭಿನಂದನೆಗಳು!
ಎಲ್ಲಾ ವಿಜೇತರಿಗೂ ಅಭಿನಂದನೆಗಳು
ಎಲ್ಲಾ ವಿಜೇತರಿಗೂ ಅಭಿನಂದನೆಗಳು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ.
ಎಲ್ಲಾ ವಿಜೇತರಿಗೆ ಹಾಗೂ ಪುರಸ್ಕೃತರಿಗೆ ಅಭಿನಂದನೆಗಳು. ಸಾಹಿತ್ಯಾಸಕ್ತರನ್ನು ಪೋತ್ರಾಹಿಸುವ ಕಾರ್ಯಕ್ರಮದ ಆಯೋಜಕರಿಗೆ ಮೆಚ್ಚುಗೆ, ನಮನಗಳು
ಎಲ್ಲಾ ವಿಜೇತರಿಗೂ ಅಭಿನಂದನೆಗಳು
ಪುರಸ್ಕೃತರಿಗೆ ಅಭಿನಂದನೆಗಳು