ಎದೆ ನುಡಿ
‘ಕನ್ನಡ ಉಳಿಸೋಣ’
ಕೂಗು ಕೇಳಿ ಬರುತಿದೆ
‘ಯಾರಿಗಾಗಿ?’ ಪ್ರಶ್ನೆಗೆ
ಉತ್ತರ ಸಿಗುತ್ತಿಲ್ಲ!
‘ಕನ್ನಡ ಬೆಳೆಸೋಣ’
ಕೂಗು ಕೇಳಿ ಬರುತಿದೆ
‘ಯಾರಿಗಾಗಿ?’ ಪ್ರಶ್ನೆಗೆ
ಉತ್ತರ ಗೊತ್ತಿಲ್ಲ..!
‘ಅಭಿಮಾನಿಗಳ್, ಅತ್ಯುಗ್ರರ್,
ಚದುರರ್, ನಾಡವರ್ಗಳ್..’
ಉಳಿದಿಹರೆಲ್ಲಿ! ದುರ್ಬೀನು
ಹಾಕಿ ಹುಡುಕಬೇಕಿದೆ
ನೆಲದ ಮಕ್ಕಳಿಗೇ ಕನ್ನಡ
ದ್ವಿತೀಯ ಭಾಷೆಯಾಗಿದೆ!
ಯಾರು ತಂದಿಟ್ಟರೀ ಸ್ಥಿತಿ…
ಕನ್ನಡಕೆ ಮುಂದೇನು ಗತಿ!
ಹಿಂದಿ, ಇಂಗ್ಲೀಷು, ತಮಿಳು,
ತೆಲುಗು, ಮಲಯಾಳಂ…
ಕಡೆಗೆ ಚೀನಾದ ಭಾಷೆಯೂ
ಚಲಾವಣೆ ಆದೀತು ಇಲ್ಲಿ
ಕನ್ನಡಕೆ ಬೇರೆ ನೆಲೆ ಎಲ್ಲಿ?
‘ಕನ್ನಡ ಸೊರಗಿದೆ, ಕನ್ನಡ ಕರಗಿದೆ’
ಕೊರಗಿನ ಕೂಗನು ನಿಲ್ಲಿಸೋಣ
ಕನ್ನಡವಾಗಲಿ ನಮ್ಮೆದೆ ಭಾಷೆ
ಕನ್ನಡಕೆ ಸದಾ ಜೈ ಎನ್ನೋಣ
–ವಸುಂಧರಾ ಕದಲೂರು
ಮಾರ್ಮಿಕ ಕವನ
ಕನ್ನಡದ ಪ್ರತಿ ಇಂದಿನ ವಾಸ್ತವವನ್ನು ಅನಾವರಣ ಗೊಳಿಸುವ ಸಾಲುಗಳು, ಚೆನ್ನಾಗಿದೆ.
ಇಂದಿನ ಕನ್ನಡ ಭಾಷೆಯ ಪರಿಸ್ಥಿತಿಯನ್ನು ವಿಡಂಬನಾತ್ಮಕ ವಾಗಿ ಕವನದಲ್ಲಿ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಮೇಡಂ.
ವಾಸ್ತವಕ್ಕೆ ಕನ್ನಡಿ ಹಿಡಿಯುವ ಚೆಂದದ ಕವನ. ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ನನ್ನ ಸಹಮತ.
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ನಮ್ಮ ಕನ್ನಡದ ವಾಸ್ತವಿಕ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿ, ಆಶಾವಾದ ಹೊಂದಿದ ಕವನ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ, ಆಳ್ ಕನ್ನಡ, ಬಾಳ್ ಕನ್ನಡ.
ಸಿರಿಗನ್ನಡವೆಂದೂ ಸೋಲದು, ಬಾಡದು, ಸಿರಿಗನ್ನಡವೆಂದೂ ಈ ಬಾಳಲ್ಲಿರುವುದು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಕನ್ನಡದ ಇತಿ ಮಿತಿಯನ್ನು ತುಂಬಾ ಚೆನ್ನಾಗಿ ವರ್ಣಿಸುತ್ತಾ ..ಮುಂದೆ ಆಗಬೇಕಿರುವುದರ ಬಗ್ಗೆ ಚಿಂತಿಸುವಂತೆ ಬರೆದಿದ್ದೀರಿ…ಮೇಡಮ್