ಬೆಳಕು-ಬಳ್ಳಿ

ಹಳೆಯದು ಎಂದೂ ಹಳೆಯದೇ

Share Button

ಕಣ್ಣೀರಿಟ್-ಕೊರ್ಗೋದು ಕಮ್ಮಿಯಾಗ್ಲೀ, ಮಗ
ಎಲ್ರೂ ಅಳ್ತಾ-ಗೋಳಿಟ್ರೆ-ಹೊರೋರ್ಯಾರ್ ನೊಗ !

ಹಳೆಯದು ಇಂದೂ-ಎಂದೂ ಹಳೇದೇ
ಕಳೆಯೋಣ ಈ ಕ್ಷಣ ಹೆಚ್ಚು ನೆನಪಿಸಿಕೊಳ್ದೇ
ಮರವೆಂದೂ ಮರುಗೋಲ್ಲಾ ಬಿದ್ದೆಲೆಗಳ್ಗೆ
ಮತ್ತೆ ಚಿಗ್ರತ್ತೆ  ಮತ್ತದೇ ಬಲ-ಛಲದೋಳ್ಗೆ
ಇರಲೇಬೇಕು ಹಂಗೇ ಜೀವನೋತ್ಸಾಹ
ಹನಿಸ್ಬೇಕ್ ಹರಿಸ್ಬೇಕ್ ಜೀವಕ್-ಪ್ರೋತ್ಸಾಹ

ಹಳೇದಿನಗ್ಳು ನಮ್ಗೆಲ್ಲಾರ್ಗೂ ಒಂದ್ಪರೀಕ್ಷೆ
ಕಡೆಗೂ ಉಳ್ಕೊಂಡಿದೀವಿ ತೊಟ್ನವಧೀಕ್ಷೆ
ಹಂಗೆಲ್ಲಾ ಸೋಲ್ಬಾರದು ಬಿಮ್ಮನೆ ಸುಮ್ಸುಮ್ನೆ
ಹೆದುರ್ಸಿ ಬೆದರ್ಸಿ ಅಟ್ತೀವಿ problem-ನೆ
ಆಗಿದೆ ಹೆಚ್ಚು ಹಾನಿ-ಗ್ಲಾನಿ, ತುಂಬಾ ಕಷ್ಟ
ಬಹಳಾ ಸಾವು, ನೋವು ಎಲ್ಲಾ ಅನಿಷ್ಟ

ಹಳೆಯದಿರಲೇಬೇಕು ಶ್ವಾಸ-ಶಾಶ್ವತ ಬೇರಾಗಿ
ಹೊಸತು ನಿಲ್ಲಬೇಕು ಸ್ಥಿರ-ಧೃಡ-ಗಡುಸಾಗಿ
rootlessness ಸು-ಸಂಸ್ಕೃತಿಯ ಕೆಡವೀತು
ಅಜ್ಜಅಜ್ಜಿಯಜ್ಜರಡಿಪಾಯ ಸದಾ ಸುಭದ್ರವು
ಭದ್ರ ಬುನಾದಿಯ ನೆನ್ನೆ-ಇಂದಿಗಾಯ್ತು ಪಿತೃವು
ಬಾಳದಾರಿ ಸವ್ಸಬೇಕು-ಸೊಗಸು,ತಿಳಿವು,ಅರಿವು

ನಾವ್ಯಾರು ಎಲ್ರನ್ನ ಕೇಳಿ ಹುಟ್ಟಿಬಂದವ್ರಲ್ಲಾ
ನಡೆದದ್ರಲ್ಲಿ-ಪಡೆದಿದ್ರಲ್ಲಿ ನಂಪಾಲೇನಿಲ್ಲಾ
ಎಲ್ರಾಡಿದ ಮಾತೆ, ಹಾಡ್ದ ಹಾಡೆ ನಾವ್ಹಾಡಿದ್ದು
ನಮ್ದೇ ರಾಗ/ತಾಳ/ದನಿ/ಪದ ಎಂದಿದ್ದದ್ದೂ?
ನಮಗ್ಯಾರಿಗೂ ಬೇಡವಿತ್ತು ಈ ಪರೀ ರಗಳೆ
ಬೇಡ್ರೀ ಅನ್ನೋಕೆ ಆಯ್ಕೆ ಇದ್ಯಾ ಹೇಳ್ಮಗಳೆ

ಉಳಿದಿದ್ದೀವಿ, ಇರೋಣ ಇದ್ದೇ ಗೆಲ್ಲೋಣ
ಹುಡುಕಿ ಕಡೆಯೋಣ ನಾಳಿನ ಹೂರಣ
ಕಟ್ಟಬೇಕಿಲ್ಲಾ ಹೊಸ್ದಾಗಿ ಹಸಿರುತೋರಣ
ಸಹಜತೆಯ ಆಭರಣಕ್ಕಿಲ್ಲಾ ಹೊಸ ಆವರಣ
ನಂಬಿಕೆ-ಸಹೃದಯತೆಯಿರಲಿ, ಕಹಿ ಮುಚ್ಚಿ
ದ್ರೋಹವನ ಕ್ಷಮಿಸಿಬಿಡೋಣ ಎಲ್ಲಾ ಕಣ್ಮುಚ್ಚಿ

ಸೋಲಾಗಿದೆ ಎಲ್ಲರ್ಗೂ, ಗೆಲ್ಲೋಣ ಜೊತ್ಜೊತೆಗೆ
ಈ-ನಂತ್ರ ಇರತ್ತೆ ನಿರಂತ್ರ ಸಂಭ್ರಮ ನಂ ಜೊತೆಗೆ

ಶ್ರೇಯಸ್ ಪರಿಚರಣ್

6 Comments on “ಹಳೆಯದು ಎಂದೂ ಹಳೆಯದೇ

  1. ಬದುಕಿನ ಹೋರಾಟದಲ್ಲಿ ಹಳೆಯ ಹೊಸದರ ಹಂದರದಲ್ಲಿ ವಿಶ್ವಾಸ ಪ್ರೀತಿ ನಂಬಿಕೆ ಕ್ಷಮಾಗುಣಗಳನ್ನು ಬೆಳೆಸಿಕೊಂಡು ಸಾಗುವ ಸಂದೇಶ ಹೊತ್ತ ಕವನ ಚೆನ್ನಾಗಿದೆ ಸಾರ್.

  2. ಸೊಗಸಾದ ಸಂದೇಶ ಹೊತ್ತ ಆಡು ಭಾಷೆಯ ವಿಶೇಷವಾದ ಕವನ ಬಹಳ ಇಷ್ಟವಾಯ್ತು..ಧನ್ಯವಾದಗಳು.

  3. ಸಕಾತಾತ್ಮಕ ಭಾವನೆಗಳನ್ನು ಬಿತ್ತುವ ಆಡುಮಾತಿನ ಕವನ ವಿಭಿನ್ನವಾಗಿ ಮೂಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *