ಕಡೆಗೋಲನ್ನು ಕಡೆಗಣಿಸಬಹುದೇ?
ವಿವಿಧ ಬಣ್ಣ ಹಾಗೂ ಸ್ವಾದಗಳ ಮೊಸರು ಮಜ್ಜಿಗೆಯ ಅವತರಣಿಕೆಗಳು ಪ್ಯಾಕೆಟ್ ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ, ರಸ್ತೆ ಬದಿಯ ಮನೆಯೊಂದರಲ್ಲಿ ಒಬ್ಬರು ಕಡೆಗೋಲಿನಲ್ಲಿ ಮೊಸರನ್ನು ಕಡೆಯುವುದು ಕಂಡಾಗ, ಕಾಲಚಕ್ರವನ್ನು ಸುಮಾರು 30 ವರ್ಷ ಹಿಂದಕ್ಕೆ ತಿರುಗಿಸಿದಂತಾಯಿತು. ಕ್ಯಾಮೆರಾ ಕ್ಲಿಕ್!
ಇದು ಮೈಸೂರಿನಿಂದ 140 ಕಿ.ಮಿ ದೂರದ ‘ಇಂಡಿಗನತ್ತ’ ಎಂಬ ಹಳ್ಳಿಯಲ್ಲಿ ಕಂಡು ಬಂದ ದೃಶ್ಯ.
ನಮ್ಮಜ್ಜಿ ಕಡೆಗೋಲಿನಲ್ಲಿ ಮೊಸರು ಕಡೆಯುತ್ತಿದ್ದುದು ನೆನಪಾಯಿತು! ಚೆನ್ನಾಗಿದೆ..