.
ಒಂದು ಹೂಜಿ ಚಹಾ ತಂದು, ಊಟದ ಮೇಜಿನ ಮಧ್ಯೆ ಇಡುತ್ತಾರ. ಊಟದ ಮಧ್ಯೆ, ಆಗಿಂದಾಗ್ಗೆ ಚಹಾವನ್ನು ತಮ್ಮ ಲೋಟಕ್ಕೆ ಬಗ್ಗಿಸಿ ಕುಡಿಯುತ್ತಾರೆ. ಈ ಚಹಾಕ್ಕೆ ಸಕ್ಕರೆ-ಹಾಲು ಸೇರಿಸುವುದಿಲ್ಲ. ಹಾಗಾಗಿ ರುಚಿ ಹೆಚ್ಚು ಕಡಿಮೆ ಬಿಸಿನೀರಿನಂತೆ ಇದ್ದು, ಸ್ವಲ್ಪ ಬಣ್ಣ ಹಾಗೂ ಪರಿಮಳ ಇರುತ್ತದೆ. ಇಂತಹ ಚಹಾವನ್ನು ಲೀಟರ್ ಗಟ್ಟಲೆ ಕುಡಿದರೂ, ಕ್ಯಾಲೊರಿ -ಕೊಲೆಸ್ಟೆರಾಲ್ ಗಳ ಭಯ ಬೇಕಿಲ್ಲ. ಮಾರ್ಚ್ ತಿಂಗಳಲ್ಲಿ ಅಲ್ಲಿ 5 ಡಿಗ್ರಿ ತಾಪಮಾನವಿತ್ತು. ಹಾಗಾಗಿ ಬಿಸಿಬಿಸಿ ಚಹಾ ನನಗೂ ಇಷ್ಟವಾಯಿತು.
.
ಒಟ್ಟಾರೆಯಾಗಿ ನೋಡಿದರೆ, ನಮ್ಮ ಹಳ್ಳಿ ಮನೆಗಳ ’ಕಷಾಯ’ವು, ಕೊತ್ತಂಬರಿ ಚಹಾ, ಜೀರಿಗೆ ಚಹಾ, ಏಲಕ್ಕಿ ಚಹಾ, ಕಾಳುಮೆಣಸು ಚಹಾ …..ಇತ್ಯಾದಿಗಳ ಸಂಗಮ, ಜತೆಗೆ ಹಾಲು-ಸಕ್ಕರೆ ಮೇಳೈಸಿದ ಅರೋಗ್ಯದಾಯಕ ಪೇಯ! ಆದರೆ ನಮ್ಮ ಬಡ ಕಷಾಯದ ಪುಡಿಗೆ ’ಮಾರ್ಕೆಟಿಂಗ್ ತಂತ್ರ’ ಸಿದ್ದಿಸಿಲ್ಲ, ಅಷ್ಟೆ!
.
– ಹೇಮಮಾಲಾ.ಬಿ
ಇ೦ತಹ ಚಹಾಗಳನ್ನು ಸಕ್ಕರೆ ಸೇರಿಸದೆ ಆಗಾಗ ಕುಡಿಯುತ್ತಿದ್ದರೆ ತೂಕ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ.