ಬೆಳಕು-ಬಳ್ಳಿ

ನಾಕು ಸಾಲಿನ ನಾಕು ಪದ್ಯ

Share Button

1.
ನಿನಗಾಗಿ ಕಾಯುವುದನ್ನು
ಈಗ ಬಿಟ್ಟಿರುವೆ. ಕಾರಣ;
ನನ್ನೊಳಗೆ ನೀ ಎಂದೋ
ಇಳಿದು ಬಿಟ್ಟಿರುವೆ

2.
ಕಡಲು- ಒಡಲು ಒಂದೇ
ಅನವರತ ಭೋರ್ಗರೆತ;
ಉಕ್ಕಿ ಹರಿಯಲಾರದ
ಬಂಧನ ಎರಡಕ್ಕೂ ಇದೇ..

3.
ಕಾದಾಟ-ಗುದ್ದಾಟ
ಅಸಮಬಲ ಪ್ರದರ್ಶನ
ಕಾವು ಆರಿ ಸಮಯ ಮೀರಿ
ಕಡೆಗೆ ನಿಂತನಿಂತಲ್ಲೇ ನಿರ್ಗಮನ.

4.
ಸಾಕೆನಿಸುವಷ್ಟು ಕೆಡುಕು
ಬೇಕೆನಿಸುವಷ್ಟು ಒಲವು
ನಿತ್ಯ ಮಂತ್ರವಾದರೆ…
ಅತಿ ಸುಂದರವೀ ಧರೆ!

ವಸುಂಧರಾ ಕದಲೂರು.

10 Comments on “ನಾಕು ಸಾಲಿನ ನಾಕು ಪದ್ಯ

  1. ಕಿರಿದರಲ್ಲಿ ಹಿರಿಯ ಅರ್ಥವನ್ನು ತಿಳಿಸುವ ನಿಮ್ಮ ನಾಲ್ಕು ಸಾಲಿನ ಕವನಗಳು ಸೊಗಸಾಗಿ ಮೂಡಿ ಬಂದಿವೆ ಮೇಡಂ ಅಭಿನಂದನೆಗಳು

  2. ನಾಲ್ಕೇ ಸಾಲು, ಆದರೂ ಅದರ ತುಂಬಾ ತುಂಬಿಹುದೊಂದು ಸವಿಯ ಹೊನಲು. Beautiful

  3. ವಿಭಿನ್ನ ವಿಷಯಗಳ ಕುರಿತಾದ ಅನೂಹ್ಯ ಸಾಲುಗಳು ಸುಂದರವಾಗಿ ಹೆಣೆಯಲಾಗಿದೆ.

  4. ಸೊಗಸಾದ,ಸರಳ ಹಾಗೂ ಸುಂದರ ಕವನವಿದು, ಅಭಿನಂದನೆಗಳು

  5. Beautiful poems..ನಿಮ್ಮ ಕಾವ್ಯ ನಿಜವಾಗಿ ಕಡಿಮೆ ಪದಗಳಲ್ಲಿ ಹೆಚ್ಚು ಹೇಳಿದೆ..

  6. ನಾಲ್ಕು ಸಾಲುಗಳ ಅದ್ಭುತ ಸೃಷ್ಟಿ ಹಿಡಿಯಷ್ಟು ಹೃದಯದಲ್ಲಿ ಕಡಲಷ್ಟು ಆಕಾಂಕ್ಷೆಗಳನ್ನು ತುಂಬಿದ್ದೀರಿ ಧನ್ಯವಾದಗಳು ತಮಗೆ

Leave a Reply to Savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *