ಧ್ಯಾನ
ಹೆತ್ತ ಕೂಸ ಲಾಲಿಸಿ ಪಾಲಿಸಿ
ಸುಸಂಸ್ಕತಿಯ ಮೈಗೂಡಿಸುವಲ್ಲಿ
ಹೆತ್ತವ್ವನ ಅವಿರತ ಮಮತೆಯೇ ಧ್ಯಾನ
ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿ
ಸುಸಂಸ್ಕೃತ ಮನುಜನಾಗಿಸುವಲ್ಲಿ
ಗುರುವಿನ ಶ್ರದ್ಧಾ ಬದ್ಧತೆಯೇ ಧ್ಯಾನ
ಹದ ಮಾಡಿ ಮಣ್ಣ ಬಿತ್ತಿ ಬೀಜವ
ಉಣಿಸಿ ನೀರ ಸಮೃದ್ಧ ಬೆಳೆ ಬೆಳೆವಲ್ಲಿ
ಅನ್ನದಾತನ ಬೆವರಿಳಿವ ಶ್ರಮವೇ ಧ್ಯಾನ
ಗೆಳೆತನದ ವೃಕ್ಷಧಡಿಯ ನೆಳಲಲ್ಲಿ
ಪ್ರಿಯಂವದೆಯಾಗದೆ ನಿಷ್ಠುರತೆಯಲ್ಲಿ
ಒಳಿತೆಸಗುವ ಮನದ ಸ್ನೇಹವೇ ಧ್ಯಾನ
ಜೀವನ ಪ್ರೀತಿಯ ಸಾಪೇಕ್ಷ ಸಾನುರಾಗ
ಬತ್ತದಂತೆ ನೀರೆರೆಯುತ ಕಾಪಿಡುವಲ್ಲಿ
ಒಲಿದ ಮನಗಳ ಒಲುಮೆಯೇ ಧ್ಯಾನ ಏನೇ
ಊರ್ಧ್ವ ಮುಖಿ ಕವಲೊಡೆದ ಕೊಂಬೆಗಳಿಗೆ
ಸಾರಸರ್ವಸ್ವವನೆಲ್ಲ ಹೀರಿ ಉಣಿಸುವಲ್ಲಿ
ಅಜ್ಞಾತ ಬೇರಿನ ಪ್ರದಾನವೇ ಧ್ಯಾನ
–ಎಂ.ಆರ್. ಅನಸೂಯ
ನಮಸ್ಕಾರ ಅತ್ಯುತ್ತಮ, ಭಾವ ಸತ್ಯಗಳ ಅನುಸಂಧಾನದ ಕವನ ನನಗೆ ತುಂಬಾ ಅಪ್ತವೆನಿಸಿತು
ಧನ್ಯವಾದಗಳು
ಅರ್ಥಪೂರ್ಣ ಕವನ
ಧನ್ಯವಾದಗಳು
ಧ್ಯಾನ ದ ವಿವಿಧ ಕೋನಗಳನ್ನು … ಅಂದರೆ ಮಾಡುವ ಕೆಲಸಗಳಲ್ಲಿ ಪ್ರತ್ಯಕ್ಷ ಪರೋಕ್ಷಗಳ ಪ್ರತಿಕ್ರಿಯೆಗಳನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಮೇಡಂ.
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
True. any good work done with concentration is dhyana
ಧನ್ಯವಾದಗಳು
ಧ್ಯಾನಾವಸ್ಥೆಯ ವಿವಿಧ ಮಜಲುಗಳ ಅನಾವರಣ ಸುಖ ಸಂಸಾರದ ಸೂತ್ರಗಳಾಗಿ ಹೊರಹೊಮ್ಮಿದೆ.
ಧನ್ಯವಾದಗಳು
ಧ್ಯಾನದ ವಿವಿಧ ಆಯಾಮಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದ ಪರಿ ಅನನ್ಯ! ಸುಂದರ ಕವನಕ್ಕೆ ಧನ್ಯವಾದಗಳು ಅನಸೂಯ ಮೇಡಂ.
ಧನ್ಯವಾದಗಳು
ನಿಜ, ಊರ್ಧ್ವಮುಖಿ ಆಗಿಸುವ ಸಾಧನವೇ ಧ್ಯಾನ!
ಬಹಳ ಅರ್ಥವತ್ತಾದ ಕವನ.