ಶಾಲಾ ಪ್ರಾರಂಭೋತ್ಸವ
ಬನ್ನಿ ಬನ್ನಿ ಶಾಲೆಗೆ
ಶಾಲೆಯಿಂದು ತೆರೆಯಿತು
ತನ್ನಿ ನಿಮ್ಮ ಹೊತ್ತಿಗೆ
ಕಾಲಿ ಹಾಳೆ ಬರೆಸಿತು
ಭಯದ ನೆರಳು ಓಡಿಸಿ
ನಕ್ಕು ನಲಿದು ಬೆರೆಯಿರಿ
ಜಯದ ನಗುವ ತೋರಿಸಿ
ಲೆಕ್ಕ ಮಾಡಿ ನಲಿಯಿರಿ
ಮೋಜು ಮಸ್ತಿ ಬೇಡವೊ
ಪಾಠವನ್ನು ಕೇಳಿರೊ
ಬೀಜದಲ್ಲಿ ಮೊಳಕೆಯೊ
ತೋಟದಂತೆ ಕಾಣಿರೊ
ಆಟಪಾಠ ಜೊತೆಯಲ್ಲಿ
ಓದು ಬರಹ ಸಾಗಲಿ
ನೋಟವೆಲ್ಲ ಹೊತ್ತಿಗೆಲಿ
ಕಾದು ನೋಡಿ ಹರ್ಷದಲಿ
ಆಟವಾಡೊ ಮೈದಾನ
ತುಂಬಿ ತುಳುಕೊ ಕಾರಂಜಿ
ಪಾಠ ಮಾಡೊ ಕೋಣೆಯು
ದುಂಬಿಯಂತೆ ಅಪರಂಜಿ
ಮಣ್ಣಿನಲ್ಲಿ ಹುದುಗಿರುವ
ಗುಣದ ಕಲಿಕೆ ಶಾಲೆಯಲಿ
ಕಣ್ಣು ಬಯಸೊ ತಾಣವ
ಕಾಣಬಹುದು ಕೋಶದಲಿ
ಕಲೆಗೆ ಬೆಲೆಯು ನಮಗಿಲ್ಲಿ
ತೋರುತಿರುವ ಗುರುಗಳು
ಮಳೆಯು ನೀಡೊ ಫಲವಿಲ್ಲಿ
ಬೇರು ಸಹಿತ ಪಾಠಗಳು
-ಮಧುಮತಿ (ಮಲ್ಲಮ್ಮ ) ರಮೇಶ್ ಪಾಟೀಲ್
Very nice. ಮೇಡಂ ನೀವು ಶಾಲೆ ಪ್ರಾರಂಭಿಸೋ ಮಾತನ್ನಾದರೂ ಆಡ್ತೀರ, ಆದರೆ ಇಲ್ಲಿ ಕೇರಳದಲ್ಲಿ ಆ ಯೋಚನೆಯನ್ನೂ ಮಾಡ್ತಿಲ್ಲ ಯಾರೂ
ಸರಳ ಸುಂದರ ಕವನ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ
SUPER MEDEM
ಮಕ್ಕಳ ವಿಕಾಸಕ್ಕೆ ಶಾಲೆಗಳ ಅವಶ್ಯಕತೆ ಹಿರಿದು ಎಂದು
ಬಿಂಬಿಸಿರುವ ಕವನ ಸೊಗಸಾಗಿದೆ.
ನೀವು ಹೇಳುವ “ಮಳೆಯು ನೀಡುವ ಫಲ”ದಂತಹ ಶಾಲೆ ಖಂಡಿತವಾಗಿ ಆರಂಭಗೊಳ್ಳಲೇ ಬೇಕು.
ಚೈತನ್ಯದ ಚಿಲುಮೆಗಳಾದ ಮಕ್ಕಳು ಆಡಿಪಾಡಿ ನಲಿವ ಅಂಗಳವಾದ ಶಾಲೆ ಬೇಗ ತೆರೆದು ಮಕ್ಕಳೆಲ್ಲ ನಲಿದಾಡುವಂತಾಗಲಿ. ಸುಂದರ ಕವನ.
ಪಕ್ಕ ಶಾಲಾ ದಿನಗಳ ನೆನಪು
ಸುಂದರ ಕವನ
ಸೊಗಸಾದ, ಭಾವಪೂರ್ಣ, ಸರಳ ಸುಂದರ ಶಿಶುಗೀತೆ.