ಹೊಸ ಬೆಳಕು..
ಶಾಂತಿ ಯೋಚಿಸುತ್ತಿದ್ದಳು. ಎಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ. ಸುರೇಶ್ ಗೆ ಹೂ ಅನ್ನಲೇ, ಊಹೂ ಅನ್ನಲೇ ಒಂದು ಕಡೆ ತನ್ನ ಮದುವೆಯಾದ ಇಬ್ಬರು ಹೆಣ್ಣು
ಮಕ್ಕಳು. ಇನ್ನೊಂದು ಕಡೆ ತನಗೆ ಸಂಗಾತಿಯಾಗಲು ಬಯಸುತ್ತಿರುವ ಸುದರ್ಶನ್. ಮಕ್ಕಳು ಚಿಕ್ಕವರಿರುವಾಗಲೇ ತನ್ನ ಗಂಡ ಜಯಂತ್ ಹೃದಯಾಘಾತ
ವಾಗಿ ತನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದ. ಗಂಡನ ಬ್ಯಾಂಕಿನ ಕೆಲಸ ತನಗೇ ದೊರಕಿದ್ದರಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಒಳ್ಳೆಯ ಕಡೆ ಮದುವೆಯಾಗಿ, ಈಗ ಇಬ್ಬರೂ ಲಂಡನ್ ನಲ್ಲಿದ್ದಾರೆ.
ಈವರೆಗೆ ಕಾಡದ ಒಂಟಿತನ ಈಗ ತನ್ನನ್ನು ಕಾಡುತ್ತಿದೆ. ಮಗಳಂದಿರು ಕರೆದರೂ, ಅಳಿಯಂದಿರ ಜತೆ ಇರಲು ಮನಸ್ಸು ಒಪ್ಪದೆ, ಒಂಟಿಯಾಗಿ ಬಾಳುತ್ತಿದ್ದಾಳೆ. ತನ್ನ ಸಹೋದ್ಯೋಗಿಯಾಗಿದ್ದ ಸುದರ್ಶನ್ ಗೆ ಕಾರಣಾಂತರಗಳಿಂದ ಮದುವೆಯಾಗಿರಲಿಲ್ಲ. ಹೆಸರಿಗೆ ತಕ್ಕಂತಿರುವ ಶಾಂತಿಯನ್ನು ಈಗ ಮದುವೆಯಾಗಲು,
ಒಂಟಿಕಾಲಲ್ಲಿ ನಿಂತಿದ್ದಾನೆ. ತನ್ನ ಈ ಇಳಿವಯಸ್ಸಿನಲ್ಲಿ ತಾನು ಮದುವೆಯಾಗುವುದು ಸರಿಯೇ. ಮನದಲ್ಲಿ ತಾಕಲಾಟ. ಮಕ್ಕಳ ಬೆಳವಣಿಗೆಯಲ್ಲಿ ತನಗೆ ದಿನಗಳು ಕಳೆದಿದ್ದು ತಿಳಿಯಲೇ. ಯೌವ್ವನದ ಆಸೆ, ಆಕಾಂಕ್ಷೆಗಳು ಮುರುಟಿಹೋಗಿದ್ದುವು. ಆದರೆ ಈಗ ಅವಳಿಗೆ ಏಕಾಂಗಿತನ ಕೊರೆಯುತ್ತಿದೆ…ಮಕ್ಕಳು ಹೇಗೆ ಈ
ಸನ್ನಿವೇಶವನ್ನೆದುರಿಸುವರು….ತಲೆ ಸಿಡಿಯತೊಡಗಿತು….
ಅಷ್ಟರಲ್ಲಿ ಮಗಳಂದಿರ ಮೇಸೇಜ್ ಬಂತು. ಅಮ್ಮ ಅಭಿನಂದನೆಗಳು, ಅಂಕಲ್ ನಮಗೆ ಫೋನ್ ಮಾಡಿವಿಷಯ ತಿಳಿಸಿದ್ದಾರೆ. ಇನ್ನು ಮುಂದಾದರೂ ನೀವು ನಿಮ್ಮ ವೈಯ್ಯುಕ್ತಿಕ ಸುಖಕ್ಕೋಸ್ಕರ ಬಾಳಿರಿ…..ಈಮೇಸೇಜ್ ಓದಿ ಶಾಂತಿಯ ಮನಸ್ಸು ನಿರಾಳವಾಯ್ತು…..ಸುದರ್ಶನ್ಗೆ ಕರೆ ಮಾಡಲು ಫೋನ್ ಎತ್ತಿದಳು. ಅವಳ ದಾರಿ ಸುಗಮವಾಗಿತ್ತು. ಕಷ್ಟಸುಖ ಗಳನ್ನು ಹಂಚಿಕೊಳ್ಳಲು ಸಂಗಾತಿಯ ಅಗತ್ಯವಿತ್ತು…..ಮಕ್ಕಳು ತುಂಬುಹೃದಯದಿಂದ ಅಮ್ಮನಿಗೆ ಹೊಸಬದುಕನ್ನು ಹಾರೈಸಿದರು…
-ಮಾಲತಿ ಜೈನ್, ಬೆಂಗಳೂರು
ಚಂದದ ಕಥೆ
Thank u so much prabha
ಧನ್ಯವಾದಗಳು ಪ್ರಭಾ
ಉತ್ತಮ ಬರಹ. ಧನ್ಯವಾದಗಳು
ಚೆನ್ನಾಗಿದೆ
Nice story. a message to society
ಒಳ್ಳೆಯ ಕಥೆ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೇಡಂ.
ಮಕ್ಕಳ ವಿಶಾಲ ಹೃದಯವಂತಿಕೆ ತಾಯಿಯನ್ನು ಚಿಕ್ಕವಳಾಗಿಸಿದ ಕಥೆ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ ಕಥೆ
ಮನಮುಟ್ಟುವ ಕಥೆ ಮಾಲತಿಯಕ್ಕಾ
ಬದಲಾವಣೆ ಜಗದ ನಿಯಮ. ಸುಗಮ ಜೀವನಕ್ಕೆ ಕಾರಣವಾಗಬಹುದಾದ ಬದಲಾವಣೆಯನ್ನು ಒಪ್ಪಿಕೊಳ್ಲುವುದರಲ್ಲೇ ಸೊಗಸಿದೆ. ಚಿಕ್ಕ ಚೊಕ್ಕ ಸುಂದರ ಸಂದೇಶವನ್ನು ಒಳಗೊಂಡ ಕಥೆ. ಚಿನ್ನಾಗಿದೆ.
Thank u
ತುಂಬಾ ಚೆನ್ನಾಗಿದೆ ಮೇಡಂ
ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು…
ಚಿಕ್ಕ,ಚೊಕ್ಕ ಕಥೆ ಚೆನ್ನಾಗಿದೆ
ಪುಟ್ಟ ಕಥೆಯಲ್ಲಿ ಮಕ್ಕಳ ಹೃದಯ ವೈಶಾಲ್ಯತೆ ಹೊಳೆದಿದೆ…ಚಂದದ ನಿರೂಪಣೆ.
ಚಿಕ್ಕ ಕತೆ ಯಲ್ಲಿ ದೊಡ್ಡ ಸಂದೇಶ ವನ್ನು ನೀಡಿದ ಕತೆ,ಸೊಗಸಾಗಿದೆ