ದುಡಿದು ಬಂದದ್ದರಲ್ಲಿ ಉಳಿಸಿದೆ ಸ್ವಲ್ಪ ಹಣ
ಹಿಂದೆ ಮಾತನಾಡಿದರು
ಇವನೆಂತಹ ಜಿಪುಣ
ಬಂದದ್ದೆಲ್ಲವನ್ನೂ ವ್ಯಯಿಸುತ್ತಿದ್ದವನ
ಕಂಡೆಂದರು ಭವಿಷ್ಯಕ್ಕೆ ಬೇಡವೇ ಹಣ
ಬೇಡಿದವನಿಗೆ ನೀಡಿದೆ , ಆಗೆಂದರು
ಕೊಡದಿರಿ, ಇವರಾಗುತ್ತಾರೆ
ದುಡಿಯದ ಸೋಮಾರಿ ಜನ
ಮುಂದಕ್ಕೆ ಹೋಗೆಂದೆ
ಮನೆಯ ಬಳಿ ಬಂದವನ,
ಹೇಳಿದರು ಇರುವಾಗ ಮಾಡಬಾರದೇ
ಕೈ ಎತ್ತಿ ದಾನ
ಸರಳವಾಗಿದ್ದೆ, ಸಂತೋಷದಿಂದಿದ್ದೆ
ಹಳಿದರು ಇದೆಂತಹ ಜೀವನ
ಊರು, ದೇಶ ಸುತ್ತಿ ಸುಖಿಸಿ ಬಂದೆ
ಆಗೆಂದರು ನೋಡೀ ಸ್ವಾಮಿ
ಇವರ ಶೋಕೀನ
ಶಾಂತ ಸ್ವಭಾವದವನಿದ್ದೆ
ಬಂತೊಂದು ಮಾತು
ತಿನ್ನಬೇಕು ನೀವು ಸ್ವಲ್ಪ ಹೆಚ್ಚು
ಉಪ್ಪು, ಹುಳಿ ಖಾರಾನ
ಕೆಲವೊಮ್ಮೆ ರೇಗಾಡಿ, ಕೂಗಾಡಿದೆ
ಹೇಳಿದರು ಯಾಕೆ ಜಾಸ್ತಿ
ಮಾಡ್ಕೋತೀರಿ ಬಿಪಿ ನಾ
ಅವರಿವರ ಮಾತಿಗೆ ತೋರಿದೆ ಕಿವುಡುತನ
ಬದುಕಿದೆ ನನ್ನಷ್ಟಕ್ಕೆ ನನ್ನ ಜೀವನ
ಇತರರಿಗಾಯಿತೋ ಇಲ್ಲವೋ
ತಿಳಿಯೆ ಮಾರ್ಗದರ್ಶನ
ಯಾರಿಗಾದರೂ ತೊಂದರೆಯಾಗಿದ್ದಕ್ಕಿಲ್ಲಾ
ಒಂದೂ ನಿದರ್ಶನ
-ನಟೇಶ (ನಾರಾಯಣ ಮೂರ್ತಿ)
.
.
ಅರ್ಥಗರ್ಭಿತ ಕವನ. ಹೇಗೇನೇ ಇದ್ದರೂ ಜನ ಎಂದಿಗೂ ಆಡಿಕೊಳ್ಳುವುದನ್ನು ಬಿಡಲಾರರು. ಏಕೆಂದರೆ ಹಲವರಿಗೆ ಇದೊಂದು ಕೆಟ್ಟ ಚಟ
ಧನ್ಯವಾದಗಳು ಮೇಡಮ್
ಸರಳ ಸುಂದರ ಕವನ ಚೆನ್ನಾಗಿದೆ.
ಚಂದದ ಉದಾಹರಣೆಗಿಂದ ಕೂಡಿದ ಸುಂದರ ವಾಸ್ತವಿಕ ಕವನ. ಅಭಿನಂದನೆಗಳು.
ಹೇಗಿದ್ದರೂ ಸರಿಯಿಲ್ಲ ಎಂಬ ಭಾವನೆ ಆಳವಾಗಿ ಬೇರೂರಿದ ಮನುಷ್ಯನ ಮನದ ಹುಳುಕನ್ನು ಯಥಾವತ್ತಾಗಿ ಬಿಂಬಿಸಿದ ಅರ್ಥಪೂರ್ಣ ಕವನ.
ತುಂಬಾ ಚೆನ್ನಾಗಿ ದೆ