ಬೆಳಕು-ಬಳ್ಳಿ

ಬಾಳಿನ ಬಂಡಿ

Share Button

ಆಡುವ ಬಾಯಿಗಳಿಗೆ ಅಂಜದೇ
ಕೆಡಿಸುವ ಕೈಗಳಿಗೆ ಸೋಲದೇ
ನೋಡುವ ಕಂಗಳಿಗೆ ಹೆದರದೇ
ದೂಡಬೇಕು ಬಾಳಿನ ಬಂಡಿ.

ಒಡಲ ಹಸಿವನು ನೀಗಿಸಲು
ಉಡಲು ಬಟ್ಟೆ ಸಂಪಾದಿಸಲು
ಕಡು ಕಷ್ಟಗಳಿಂದ ಪಾರಾಗಲು
ದೂಡಬೇಕು ಬಾಳಿನ ಬಂಡಿ.

ಮಡದಿ ಮಕ್ಕಳನು ಸಾಕಲು
ಒಡವೆ ಬಂಗಾರ ಕೂಡಿಡಲು
ಬಡತನದ ಬೇಗೆ ತಣ್ಣಿಸಲು
ದೂಡಬೇಕು ಬಾಳಿನ ಬಂಡಿ.

ಹಡೆದವರ ಹೆಸರನ್ನ ಉಳಿಸಲು
ಪಡಸಾಲೆ ಮನೆಯೊಂದ ಕಟ್ಟಲು
ಎಡವಿ ಬೀಳದಂತೆ ಮೇಲೇಳಲು
ದೂಡಬೇಕು ಬಾಳಿನ ಬಂಡಿ.

ಅಡವಿ ಸುಮಗಳಂತೆ ನಗಲು
ಜಡತ್ವ ಅಲಸ್ಯದಿ ಮುಕ್ತವಾಗಲು
ಮೃಡನಾಟದ ನಾಟಕ ಮುಗಿಸಲು
ದೂಡಬೇಕು ಬಾಳಿನ ಬಂಡಿ.

-ಶಿವಮೂರ್ತಿ.ಹೆಚ್, ದಾವಣಗೆರೆ.

6 Comments on “ಬಾಳಿನ ಬಂಡಿ

  1. ಅರ್ಥಪೂರ್ಣ ವಾದ ಕವನ ಚೆನ್ನಾಗಿದೆ ಅಭಿನಂದನೆಗಳು ಸಾರ್.

  2. ಪೂರ್ತಿ ಬದುಕಿನ ಉದ್ದೇಶವನ್ನು ತಿಳಿಸುವ ಕವನ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *