ಹಾಲು
ಶುಭ್ರ ಶ್ವೇತ ಬಣ್ಣದ ಹಾಲೇ
ಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಲೀಲೆ,
ಹುಟ್ಟಿದ ತಕ್ಷಣ ಹಸಿವೆ ಹಿಂಗಿಸುವ ನೀನು
ಕಂದಮ್ಮಗಳ ಪಾಲಿನ ಕಾಮಧೇನು,
ಪೌಷ್ಟಿಕಾಂಶವ ಹೆಚ್ಚಿಸುವ ಆರೋಗ್ಯದಾತನಲ್ಲದೇ
ಉಪವಾಸದ ಸಮಯದ ಉಪಯುಕ್ತ ಪೇಯ ನೀನು,
ಗೋವು ಎಮ್ಮೆ
ಸಾಕಿದವರ ಕಣ್ಮಣಿಯಲ್ಲದೇ
ಚಹಾ ಕಾಫಿ ಕಷಾಯ ಎಂಬ ಮಾನವ ‘ಪೆಟ್ರೋಲ್’ ಗೆ ಮೂಲಾಧಾರ ನೀನು,
ದೇವನೊಬ್ಬ ನಾಮ ಹಲವು ಎಂಬಂತೆ
ನಂದಿನಿ ಶ್ರೀಕೃಷ್ಣ ಆದಿತ್ಯ ಗೋವಿಂದ
ಗೋವರ್ಧನ ಅಮುಲ ಮುಂತಾದ ಹೆಸರುಳ್ಳವ ನೀನು ,
ಡೇರಿ ಸಾಮಗ್ರಿಗಳ ತಯಾರಿಕೆಗೆ ಆಧಾರವೆನಿಸಿ
ಸರಕಾರದ ಆದಾಯ ಹೆಚ್ಚಿಸುತಿಹೆ ನೀನು,
ಪಂಚಗವ್ಯ ಪಂಚಾಮೃತಗಳಲ್ಲಿದ್ದು
ಗೃಹಪ್ರವೇಶ ಸಮಾರಂಭದಲ್ಲಿ ಉಕ್ಕಿಸಿಕೊಳ್ಳುವ
ಶುಭ ಸಂಕೇತ ನೀನು,
ಹೀಗೆ ಮಹಿಮಾಮಯನಾದ ಹಾಲೇ..
ಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಲೀಲೆ…
‘ಎಲ್ಲರಿಗೂ ವಿಶ್ವ ಹಾಲು ದಿನದ ಶುಭಾಶಯಗಳು’
-ಮಾಲತೇಶ, ಹುಬ್ಬಳ್ಳಿ
ಬಹಳ ಒಂದು ಸಿಂಪಲ್ ವಸ್ತುವನ್ನು, ವಿಚಾರವನ್ನು ಕವಿತೆಯಾಗಿಸಿದ ರೀತಿ ಸೊಗಸಾಗಿದೆ.
ನಮ್ಮೆಲ್ಲರ ದಿನ ನಿತ್ಯದ ಅಮೃತ.. ಹಾಲಿನ ವಿರಾಟ್ ರೂಪವನ್ನು ಕವನದ ಮೂಲಕ ತೋರಿಸಿದ ಪರಿ ಬಹಳ ಸೊಗಸಾಗಿದೆ.