ಕವಿನೆನಪು 47: ಕೆ ಎಸ್ ನ ಕುಟುಂಬದ ಸದಸ್ಯರು
ಕುಟುಂಬದ ಸದಸ್ಯರ ಪರಿಚಯವು ಈ ಲೇಖನ ಮಾಲಿಕೆಯ ಭಾಗವೆಂದು ಭಾವಿಸಿ,ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಡಲು ಬಯಸುತ್ತೇನೆ.
1. ದೊಡ್ಡ ಅಕ್ಕ ಶ್ರೀಮತಿ ನಾಗಲಕ್ಹ್ಮಿ ಕೆ ಆರ್, ಪತಿ ದಿವಂಗತ ರಾಮಸ್ವಾಮಿ ಎಲ್ಲರಿಗಿಂತ ಹಿರಿಯವರು. ಈಗ 81 ವರುಷ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸ. ಅಮ್ಮನಿಗಿಂತ ಹೆಚ್ಚಾಗಿ ತಮ್ಮ ತಂಗಿಯರ ಸಾಕಿ ಸಲಹಿದ ವಾತ್ಸಲ್ಯಮೂರ್ತಿ.
2. ಶ್ರೀ ಕೆ ಎನ್ ಹರಿಹರ , ದೊಡ್ಡ ಅಣ್ಣ. ಬಿ ಎ ಹಾಗೂ ಮುದ್ರಣ ತಂತ್ರಜ್ನಾನದಲ್ಲಿ ಡಿಪ್ಲೊಮೊ. ಪ್ರಜಾವಾಣಿ ಕಛೇರಿ, ಕರ್ಣಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಇಸ್ರೋ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿವೃತ್ತ. ಸಂಗೀತ ಸಾಹಿತ್ಯಗಳಲ್ಲಿ ಆಸಕ್ತ. ಕೆ ಎಸ್ ನ ಕುಟುಂಬ ಟ್ರಸ್ಟ್ ಆರಂಭಿಸಿದವರು. ಮುದ್ರಣ ಹಾಗೂ ಪ್ರಕಟಣೋದ್ಯಮದಲ್ಲಿ ಗಣನೀಯ ಸೇವೆ, iso audit, abc audit ಗಳ ಸದಸ್ಯನಾಗಿ ಕಾರ್ಯನಿರ್ವಹಣೆ. ಈಗ 79 ವರುಷ. ಬೆಂಗಳೂರಿನಲ್ಲಿ ವಾಸ.
3. ತುಂಗಭದ್ರ(ವೀಣಾ ವೆಂಕಟೇಶ್) ಪತಿ ಮೈಸೂರು ಬ್ಯಾಂಕಿನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾದ ಜಿ ವಿ ವೆಂಕಟೇಶ್. ಇಬ್ಬರೂ ಸಾಹಿತ್ಯಾಸಕ್ತರು. ಬೆಂಗಳೂರಿನ ಹನುಮಂತನಗರ ಮೈಸೂರು ಬ್ಯಾಂಕ್ ಕಾಲನಿಯಲ್ಲಿ ವಾಸ.ನಮ್ಮ ತಂದೆಯವರ ಸ್ಮರಣೆಯಲ್ಲಿ ಹಲವಾರು ಗೀತ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.ಇವರ ಮಗಳು ಡಾ.ಮೇಖಲಾ ಸರ್ಕಾರದ ಕೆ ಎಸ್ ನ ಟ್ರಸ್ಟ್ ನ ಸದಸ್ಯೆ. ಕೆ ಎಸ್ ನ ರ ಹಲವಾರು ಕವನಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡಿರುವ ಪ್ರತಿಭಾವಂತೆ.
4. ಕೆ ಎನ್ ಬಾಲಸುಬ್ರಹ್ಮಣ್ಯ, ಬಿ ಎಸ್ ಸಿ , ರಕ್ಷಣಾ ಸಂಸ್ಥೆ ಎಲ್ ಆರ್ ಡಿ ಇ ಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತ. 68 ವರುಷ . ಸಂಸ್ಕೃತ ,ವೇದೋಪನಿಷತ್ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ತನ್ನ 19ನೆಯ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿ ಕುಟುಂಬದ ನಿರ್ವಹಣೆಗೆ ಸಹಕರಿಸಿದ ತ್ಯಾಗಜೀವಿ. ಬೆಂಗಳೂರಿನ ಸಚ್ಚಿದಾನಂದನಗರದಲ್ಲಿ ವಾಸ .
5. ಕೆ ಎನ್ ಮಹಾಬಲ (ಈ ಲೇಖಕ ) ಎಂ ಕಾಂ ,ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತ. 66 ವರುಷ. ಸಾಹಿತ್ಯಾಸಕ್ತ ಒಂದು ಕವನ ಸಂಕಲನ “ಇಂದೂ ಇದ್ದಾರೆ’ ಹಾಗೂ ಹಾಸ್ಯಲೇಖನ “ಹಾಸ್ಯಬಂಧ “ಪ್ರಕಟ. ಸುನೀತಗಳ ಸಂಕಲನ “ಬೊಗಸೆ ತುಂಬ ಹೂವು“ ಅಚ್ಚಿನಲ್ಲಿ. ಅನುವಾದವೂ ಮೆಚ್ಚಿನಕ್ಷೇತ್ರವೇ. ಸಹಧರ್ಮಿಣಿ ಡಾ.ಕೆ ಆರ್ ಶ್ರೀಲಕ್ಷ್ಮಿ ಬೆಂಗಳೂರಿನ ಜಯನಗರದ ಸರಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ಬನಶಂಕರಿ ಮೂರನೆ ಹಂತದಲ್ಲಿ ವಾಸ.
6. ದಿವಂಗತ ವಿಜಯಲಕ್ಷ್ಮಿ(ವಿಜಯ ರಮೇಶ್) ನನ್ನ ಮೊದಲ ತಂಗಿ.1957 ರಲ್ಲಿ ಜನನ. ವಸ್ತ್ರವಿನ್ಯಾಸದಲ್ಲಿ ಡಿಪ್ಲೊಮೊ ಮಾಡಿದ್ದವಳು. ಉತ್ತಮ ಗೃಹಿಣಿ ಹಾಗೂ ಪಾಕತಜ್ನೆ. ದುರದೃಷ್ಟವಶಾತ್ 2015 ರ ಫೆಬ್ರವರಿಯಲ್ಲಿ H1NI ಸೋಂಕಿನಿಂದ ತೀರಿಕೊಂಡಳು.
7. ಕೆ ಎನ್ ಉಮಾದೇವಿ (ಉಮಾ ಕೂದವಳ್ಳಿ) 61 ವರುಷ ನನ್ನ ಎರಡನೆಯ ತಂಗಿ. ಬಿ ಎಸ್ ಸಿ. ರಕ್ಷಣಾ ಲೆಕ್ಕಪತ್ರ ಇಲಾಖೆ ಯಲ್ಲಿ ಹಿರಿಯ ಲೆಕ್ಕಪರಿಶೋಧಕಿಯಾಗಿ ನಿವೃತ್ತಳು ಪತಿ ಅನಿಲ್ ಕುಮಾರ್ ಸ್ವಯಂ ಉದ್ಯಮಿಯಾಗಿದ್ದವರು. ಬೆಂಗಳೂರಿನ ಬನಶಂಕರಿ ಮೂರನೆ ಹಂತದಲ್ಲಿ ವಾಸ .
8. ಕೆ ಎನ್ ಬದರೀನಾಥ್. 59ವರುಷ. ಬಿಎಸ್ಸಿ. ಪತ್ರಕರ್ತನಾಗುವ ಹಂಬಲವಿದ್ದರೂ ಸಾಧ್ಯವಾಗದೆ, ಬೆಂಗಳೂರಿನ ಪ್ರಸಿದ್ಧ ಲೆಕ್ಕಪರಿಶೋಧಕರ ಸಂಸ್ಥೆಯಲ್ಲಿ ಉದ್ಯೋಗ. ಬೆಂಗಳೂರಿನಲ್ಲಿ ವಾಸ.
ಇದು ನಮ್ಮ ಕುಟುಂಬ ಸದಸ್ಯರ ವಿವರ. ಎಲ್ಲರನ್ನೂ ದಡ ಸೇರಿಸಲು ತಂದೆ ತಾಯಿಗಳಿಗೆ ಸಾಧ್ಯವಾದದ್ದೇ ಒಂದು ಪವಾಡವೆನ್ನಿಸುತ್ತದೆ.
(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=32367
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ನಿಜವಾಗಿಯೂ ನಿಮ್ಮ ಕುಟುಂಬದ ವಿವರಣೆ ನೀಡಿದ ನಿಮಗೆ ಧನ್ಯವಾದಗಳು ಸರ್.ಅದನ್ನು ತಿಳಿದುಕೊಳ್ಳಬೇಕೆಂಬ ಹಂಬಲವಿತ್ತು.
Nice
ಫೋಟೋ ಹಂಚಿಕೊಂಡಿದ್ದರೆ ಮತ್ತಷ್ಟು ಸಂತೋಷವಾಗುತ್ತಿತ್ತು.
ಕುಟುಂಬ ಸದಸ್ಯರೆಲ್ಲರ ಸೂಕ್ಷ್ಮ ಪರಿಚಯ ಇಷ್ಟವಾಯ್ತು.. ಜೊತೆಗೆ ಭಾವಚಿತ್ರಗಳಿದ್ದರೆ ಚೆನ್ನಾಗಿತ್ತು. ಧನ್ಯವಾದಗಳು ಸರ್.
ಪರಿಚಯಕ್ಕೆ ಧನ್ಯವಾದಗಳು…
ಪ್ರಖ್ಯಾತನಾಮರ ಕುಟುಂಬ ಪರಿಚಯ ತಿಳಿದುಕೊಳ್ಳುವ ಹಂಬಲ ಅಭಿಮಾನಿಗಳಿರುತ್ತದೆ. ಕುಟುಂಬದ ಸದಸ್ಯರ ಪರಿಚಯ ಮಾಡಿಕೊಟ್ಟದ್ದು ಇಷ್ಟವಾಯಿತು..