“ಅವಳು”

Share Button

ಅಮ್ಮನಿಗೇನು ಬೇಕು
ಒಮ್ಮಯಾದರು ಯೋಚಿಸಿ ಸಾಕು
ಜೀವವಾಹಿನಿ ಅಮ್ಮನಿಗೊಂದಿಷ್ಟು
ಸಮಯ ಕೊಡಬೇಕೆಂದು,,,,
ಜೀವಜಲ ಅಮ್ಮನಿಗೆ
ಖಾಸಗಿ ಸಮಯ
ಬಿಟ್ಟು ಕೊಡಬೇಕೆಂದು,,,,

ಕಣ್ಣಲ್ಲಿ ಕಣ್ಣಿಟ್ಟು ಕಾಯುವ
ಅವಳ ಕಣ್ಣಲ್ಲಿ ಕಣ್ಣೀರುಗಳ ನಡುವೆ
ಅವಳದೇ ಕನಸುಗಳಿಗೆ ಜಾಗ ಕೊಡಿ,,,,
ಜಂಜಡದ ಜೀವನದ ನಡುವೆ
ಭಾವಸಾಗರದಲಿ ಕೊಂಚ ಈಜಲು
ಬಿಡುವು ಮಾಡಿ ಕೊಡಿ,,,,

ಅಮೃತ ವನೀವ
ಅಮ್ಮನೊಳಗಿರುವ
‘ಅವಳು’ಅರಳುತಿರಲು
ಅವಕಾಶದ ಆಕಾಶ ಮಿನುಗಲು ಬಿಡಿ,,,

ಅಮ್ಮನಿಗೇನು ಬೇಕು
ಒಮ್ಮೆಯಾದರೂ….
ಆಲೋಚಿಸಿ ಸಾಕು….

-ವಿದ್ಯಾ ವೆಂಕಟೇಶ್, ಮೈಸೂರು

12 Responses

  1. ಉಮೇಶ ಪಾಟೀಲ says:

    Nice…

  2. ಅಮ್ಮನಿಗೇನು ಬೇಕು… ಆಲೋಚನೆ ಚೆನ್ನಾಗಿ ದೆ ಆದರೆ ಅದನ್ನು ಕೊಡುವವರು ಯಾರು…ನಮಗೆ ಮಕ್ಕಳಾದಾಗ ಅರ್ಥವಾಗುತ್ತದೆ..ಅದರ ಹಿಂದೆ ಅವರಿಗೆ ನಾವು ಮಾಡಿದ ಕೋಟಲೆ ಕಣ್ಣಿಗೆ ಕಟ್ಟುತ್ತದೆ.. ಇನ್ನು ನಾವು ಏನನ್ನು ಬಯಸಬಹುದು ನಮಗೆ ನಾವೇ .. ಹುಡುಕಿ ಕೊಳ್ಳಬೇಕು..ಸರಳ ನಿರೂಪಣೆಯ ಕವಿತೆ ಚೆನ್ನಾಗಿ ಮೂಡಿ ಬಂದಿದೆ ಸೋದರಿ .

  3. ನಯನ ಬಜಕೂಡ್ಲು says:

    ಸುಂದರವಾದ ಸಂದೇಶ ಹೊತ್ತ ಕವನ.

  4. Prahlada Rao says:

    Very thoughtful & empathetic feelings for a much-taken-for-granted figure in the family: MOTHER!
    Good poem…

  5. Padma Anand says:

    ಅಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸುವಲ್ಲಿ ಬಸವಳಿಯುತ್ತಿರಲು, ಮಕ್ಕಳು ಅವಳ ಅಗತ್ಯಗಳ ಬಗ್ಗೆ ಚಿಂತಿಸುತ್ತಾರೆಂಬುದು ಕಲಿಗಾಲದಲ್ಲಿ ಭ್ರಮೆ. ಅವಳೇ ಅವಳ ಬಗ್ಗೆಯೂ ಚಿಂತಿಸಲು ಸಮಯ ಮಾಡಿಕೊಳ್ಳ ಬೇಕು. ಚಿಂತನೆಗೆ ಹಚ್ಚುವ ಕವನ ಸೊಗಸಾಗಿ ಮೂಡಿ ಬಂದಿದೆ.

  6. ಶಂಕರಿ ಶರ್ಮ says:

    ಅಮ್ಮನಿಗಾಗಿ ಸಮಯ ಕೊಡಲು ಯಾರಿದ್ದಾರೆ?? ಅವಳ ಸಮಯ ಮನೆಯವರಿಗಾಗಿ ಮೀಸಲು.. ಒಂದೊಳ್ಳೆಯ ಬೇಡಿಕೆಯಾಗಿ ಮೂಡಿ ಬಂದಿದೆ, ಚಂದದ ಕವನ.

  7. Pooja says:

    Very true parvathakka.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: