ಅಪರೂಪವಾಗಿ ಪೇತೆ ಕಡೆಗೆ ಸ್ಕೂಟರಲ್ಲಿ ಹೊರಟೆ. ಅಲ್ಲಿ ರೂಪೇಶ್ ಟೆಕ್ಸ್ ಟೈಲ್ ಒಡತಿಯನ್ನು ಬೇಟಿಯಾಗಲೆಂದು ಸ್ಕೂಟರ್ ನಿಲ್ಲಿಸಿ ಅತ್ತ ಕಡೆ ನಡೆದೆ. ಅವಳನ್ನು ಮಾತಾಡಿಸದೆ ಪರಸ್ಪರ ಭೇಟಿಯಾಗದೆ ಸುಮಾರು ಸಮಯವಾಗಿತ್ತು. ಹತ್ತು ನಿಮಿಷ ಮಾತಾಡಿ, ಹೊರಡಲನುವಾದೆ. ಒಂದು ಚೂಡಿದಾರ ಬಟ್ಟೆ, ಎರಡು ಸೀರೆ ನಾನು ಎಷ್ಟು ಬೇಡವೆಂದರೂ ಕೇಳದೆ ಉಡುಗೊರೆ ಕೊಟ್ಟಳು. ಸಂಕೋಚದಿಂದಲೇ ಪಡೆದೆ.
ನಾವು ಅಂಗಡಿ ಬಾಗಿಲು ಶಾಶ್ವತವಾಗಿ ಮುಚ್ಚುತ್ತಿದ್ದೇವೆ. ದಾಸ್ತಾನು ಇರುವ ಬಟ್ಟೆಯನ್ನೆಲ್ಲ ನಮ್ಮ ಅಂಗಡಿಗೆ ಬರುವ ಗಿರಾಕಿಗಳಿಗೆ ಹಣ ಪಡೆಯದೆ ಹಾಗೆಯೇ ಕೊಡುತ್ತೇವೆ. ಓಹೋ. ಹಾಗಾದರೆ ಎರಡು ಸೀರೆ ನಮ್ಮ ಸಿದ್ದಮ್ಮನಿಗೆ ತೆಗೆದುಕೊಳ್ಳಲೆ? ಎಂದು ಕೇಳಿದೆ. ಧಾರಳಾವಾಗಿ. ಎರಡಲ್ಲ ನಾಲ್ಕು ತಗೊ ಎಂದಳು. ನನಗೆ ಉಡುಗೊರೆಯಾಗಿತ್ತ ಬಟ್ಟೆಯನ್ನು ಅಲ್ಲೇ ಮೇಜಿನ ಬಳಿ ಇಟ್ಟು, ಸೀರೆ ತೆಗೆದುಕೊಳ್ಳಲು ಅತ್ತ ನಡೆದೆ. ಎರಡು ಸೀರೆ ತೆಗೆದುಕೊಂಡು, ನನಗಿತ್ತ ಉಡುಗೊರೆ ಬಟ್ಟೆ ತೆಗೆದುಕೊಳ್ಳಲು ನೋಡಿದರೆ ಅಲ್ಲಿ ಏನಿದೆ? ಖಾಲಿ. ಯಾರೋ ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ. ನನಗೆ ಬಗೆದಿಲ್ಲವದು ಎಂದು ಹೊರಬಂದು ಸ್ಕೂಟರ್ ಕೀಗಾಗಿ ತಡಕಾಡಿದೆ.
ಕಣ್ಣುಬಿಟ್ಟಾಗ, ಬಾಲಭಾಸ್ಕರ ಅದಾಗಲೇ ಕಾರ್ಯಮಗ್ನನಾಗಿದ್ದದ್ದು ಕಂಡಿತು. ರೂಪೇಶ್ ಟೆಕ್ಟ್ ಟೈಲ್ ಒಡತಿ ಯಾರು? ಅವರ ಹೆಸರೇನು? ಎಂದು ಯೋಚಿಸುತ್ತ ಹಾಸಿಗೆಯಿಂದ ಎದ್ದೆ!
-ರುಕ್ಮಿಣಿಮಾಲಾ, ಮೈಸೂರು
ಹ್ಹ… ಹ್ಹ… ಹ್ಹ.
ಒಮ್ಮೊಮ್ಮೆ ಬೀಳುವ ಕನಸುಗಳಿಗೆ ಕೊನೆ ಮೊದಲಿರುವುದಿಲ್ಲ. ವಿಚಿತ್ರವಾಗಿರುತ್ತವೆ
ಹೌದು.
ನಿಮ್ಮ ಕನಸು ಬಹಳ ಚೆನ್ನಾಗಿದೆ..ತಮಾಷೆಯಾಗಿದೆ
ಧನ್ಯವಾದ
ಕನಸು ನನಸಾದರೆ
ಬಟ್ಟೆಸಿಗುತ್ತಿತ್ತು!
ಆಹಾ… ನಿಮ್ಮ ಕನಸು ನನಸಾಗಲಿ ಎಂದು ಹಾರೈಸಲೇ?
ಕನಸು. ಮಾತ್ರ ಸೂಪರ್
ನಿಜಕ್ಕೂ, ಸೂಪರ್. ಆದರದು ಕನಸಷ್ಟೆ. ಪರಿಕಲ್ಪನೆ ಸೊಗಸಾಗಿದೆ.