ಬಾಳಿನ ನಾಟಕ
ಜೀವನವೆಂಬುವ
ಕವಲು ದಾರಿಯಲಿ
ದೇವರ ನೆನೆಯುತ
ನಾವೆಲ್ಲರು ಹೊರಟಿರಲು
ಯಾವ ಭಯ ನಮಗಿಲ್ಲ.
ಕಷ್ಟ ಸುಖಗಳ
ಕಲ್ಲು ಮುಳ್ಳಿನ
ಕವಲು ದಾರಿಯಲಿ
ಎಷ್ಟೇ ನೋವಾದರೂ
ಬಾಳ ಪಯಣ ನಿಲ್ಲುವುದಿಲ್ಲ.
ತಾಯ್ತಂದೆಯರು
ಒಡ ಹುಟ್ಟಿದವರು
ಬಂಧು ಮಿತ್ರರಿಲ್ಲದೇ
ಏಕಾಂಗಿ ಸಂಚಾರಿಯಾದರು
ಬಾಳಯಾನ ಸಾಗಬೇಕಲ್ಲ.
ಸೃಷ್ಟಿಕರ್ತ ಸೃಷ್ಟಿಸಿದ
ಸೂತ್ರದ ಗೊಂಬೆಗಳಾಗಿ
ಪಾತ್ರಾಭಿನಯವ ಮಾಡುತ
ಬಾಳಿನ ನಾಟಕವ ಮುಗಿಸಿ
ನಾವೆಲ್ಲರು ಹೋಗಬೇಕಲ್ಲ.
-ಶಿವಮೂರ್ತಿ.ಹೆಚ್. ದಾವಣಗೆರೆ.
ಬದುಕಿನ ಅರ್ಥ, ಉದ್ದೇಶವನ್ನು ಸಾರುವ ಕವನ ಚೆನ್ನಾಗಿದೆ.
ಹೃತ್ಪೂರ್ವಕ ಕೃತಜ್ಞತೆಗಳು ಮೇಡಂ
ಬಾಳಿನ ಕವಲುದಾರಿಯಲ್ಲಿ ಒಬ್ಬಂಟಿಯಾಗಿ ಸಾಗಬೇಕಾದ ಅನಿವಾರ್ಯತೆಯನ್ನು ಸೊಗಸಾಗಿ ಬಿಂಬಿಸಿದ ಕವನವು ಚೆನ್ನಾಗಿದೆ.
ಹೃತ್ಪೂರ್ವಕ ಕೃತಜ್ಞತೆಗಳು ಸರ್