ಪ್ರವಾಸ

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

Share Button
ಅಕ್ಷರಧಾಮ, ಅಹ್ಮದಾಬಾದ್ ಗುಜರಾತ್

ಗುಜರಾತ್ ನಲ್ಲಿ ಹಲವಾರು ಕಡೆ ಅಕ್ಷರಧಾಮ ಮಂದಿರಗಳಿವೆ.  23/01/2019  ರಂದು ನಾವು  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅರ್ಧ ಗಂಟೆ ಪ್ರಯಾಣ ಮಾಡಿ   ಅಹ್ಮದಾಬಾದ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು. ಬಹಳ ಸುಂದರವಾದ ಪರಿಸರದಲ್ಲಿ ನಿರ್ಮಾಣವಾದ ‘ಸ್ವಾಮಿ ನಾರಾಯಣ’ ಮಂದಿರವಿದು. ಇಲ್ಲಿ ಅವರು  ಎಳೆಯ ವಯಸ್ಸಿನಲ್ಲಿಯೇ ಮಾಡಿದ ಆಧ್ಯಾತ್ಮ ಸಾಧನೆ ಮತ್ತು ಸಾಮಾಜಿಕ ಜಾಗೃತಿಯ ಬಗ್ಗೆ ಪ್ರಾತ್ಯಕ್ಷಿಕೆಗಳಿವೆ. ಸಂಜೆ  ಏಳು‌ಕಾಲು ಗಂಟೆಯಿಂದ ಎಂಟರ ವರೆಗೆ  ಪ್ರದರ್ಶನಗೊಳ್ಳುವ  ವಾಟರ್ ಶೋ ಮತ್ತು ಲೇಸರ್  ಶೋ ಅದ್ಭುತವಾಗಿದೆ.

ವಿಶಾಲವಾದ ಸ್ಥಳದಲ್ಲಿ, ಬಹಳ ಸೊಗಸಾಗಿ ಕಟ್ಟಿದ ಆಧುನಿಕ ಶೈಲಿಯ ಕಟ್ಟಡವಿದು. ಸುತ್ತುಮುತ್ತಲಿನ ಕಲಾತ್ಮಕವಾದ ಉದ್ಯಾನ, ಮನಮೋಹಕ ಕಾರಂಜಿಗಳು, ಪ್ರಾಂಗಣದ ಪ್ರತಿ ಕಂಬದಲ್ಲಿಯೂ ಕೆತ್ತಿರುವ ಆಧುನಿಕ ಶಿಲ್ಪ ಇತ್ಯಾದಿಗಳುಳ್ಳ ಅಕ್ಷರಧಾಮವನ್ನು ಸಂಪೂರ್ಣ ನೋಡಲು  ಕನಿಷ್ಟ 4 ತಾಸು ಬೇಕು.  ಅಕ್ಷರಧಾಮವು ಮಂಗಳವಾರದಿಂದ ಭಾನುವಾರದ ವರೆಗೆ, ಬೆಳಗ್ಗೆ 11 ಗಂಟೆಯಿಂದ ಸಂಜೆ 0730  ರ ವರೆಗೆ ತೆರೆದಿರುತ್ತದೆ. ಸೋಮವಾರ ರಜಾದಿನವಾಗಿದೆ.

ಇಲ್ಲಿನ ವೈಭವೋಪೇತವಾದ ಗರ್ಭಗುಡಿಯಲ್ಲಿ ‘ಸ್ವಾಮಿ ನಾರಾಯಣ’ನ ವಿಗ್ರಹವಿದೆ. ಪ್ರಾಂಗಣದಲ್ಲಿರುವ ಹಲವಾರು  ಪ್ರದರ್ಶನಗಳಲ್ಲಿ ಸ್ವಾಮಿ ನಾರಾಯಣ ಅವರ ಬಾಲ್ಯ ಹಾಗೂ ಆಧ್ಯಾತ್ಮಿಕ ಸಾಧನೆಗಳ ಚಿತ್ರಣವಿದೆ. ಸಾಯಂಕಾಲ 0645 ಗಂಟೆಯಿಂದ 0730  ಗಂಟೆ ವರೆಗೆ ನೃತ್ಯಕಾರಂಜಿ ( ವಾಟರ್ ಶೋ) ಮತ್ತು ಲೇಸರ್ ಶೋ ಇರುತ್ತದೆ.  ಲೇಸರ್ ಶೋ ನಲ್ಲಿ, ವಾಜಶ್ರವಸ್ಸು ಋಷಿಯ ಪುತ್ರನಾದ ನಚಿಕೇತನು  ಯಮನನ್ನು ಭೇಟಿಯಾಗಿ, ಮೃತ್ಯು ರಹಸ್ಯವನ್ನು ತಿಳಿದು ಬರುವ  ಪ್ರಾತ್ಯಕ್ಷಿಕೆಯಿದೆ,


(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=32054

– ಹೇಮಮಾಲಾ.ಬಿ

5 Comments on “ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

  1. ಎಂದಿನಂತೆ ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬಂದಿದೆ ಆದರೆ ತುಂಬಾ ಚಿಕ್ಕದೆಂದು ನನ್ನ ಅನಿಸಿಕೆ ಇನ್ನೂ ಸ್ವಲ್ಪ ಬರೆಯಬಹುದಿತ್ತು.ಅಭಿನಂದನೆಗಳು.

  2. ಹಲವಾರು ವರ್ಷಗಳ ಹಿಂದೆ ಇದೇ ಅಕ್ಷರಧಾಮಕ್ಕೆ ಹೋಗಿದ್ದಾಗಿನ ಸವಿನೆನಪು ಮರುಕಳಿಸಿತು. ಬಹಳ ಅದ್ಭುತ ರೀತಿಯಲ್ಲಿ ನೀವು ತಿಳಿಸಿದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವ ರೀತಿ ಮರೆಯುವಂತೆಯೇ ಇಲ್ಲ. ಗುಜರಾತಿಗೆ ಹೋದಾಗ ಅಕ್ಷರಧಾಮಕ್ಕೆ ಭೇಟಿ ನೀಡಲು ಖಂಡಿತಾ ಮರೆಯಬಾರದು. ಪೂರಕ ಚಿತ್ರಗಳೊಂದಿಗಿನ ನಿರೂಪಣೆ ಎಂದಿನಂತೆ ಚೆನ್ನ.

  3. ಪ್ರವಾಸ ಕಥನದ ಈ ಕಂತನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *