ತಾಯಿಯ ಹೆಮ್ಮೆ
ಅಮ್ಮ ನಾನು ಹೋಗಲೇನು
ಶಾಲೆಗಿಂದು ಕಲಿಯಲು
ಬೇಡ ಮಗಳೆ ಹೋಗಬೇಡ
ಹೋಗು ನೀ ದನಕಾಯಲು
ಅಮ್ಮ ದನವು ಕಟ್ಟಿದ್ದಾಯಿತು
ಹೋಗಲೇನು ಆಡಲು
ಹೋಗಬೇಡ ಮಗಳೆಯೀಗ
ಹೋಗು ಅಡುಗೆ ಮಾಡಲು
ಅಮ್ಮ ಅಡುಗೆ ಮಾಡಿದೆ
ಕೂಡುವೆ ನಾನು ಬರೆಯಲು
ಬೇಡ ಮಗಳೆ ಕಲಿತರೇನು
ಹೋಗು ಮುಸುರೆ ತೊಳೆಯಲು
ಅಮ್ಮ ತಮ್ಮ ನೋಡದಾಗ
ನಿಮ್ಮನು ನಾನು ಸಾಕುವೆ
ಶಾಲೆಗೆ ಹೋಗಿ ಓದಬೇಕು
ನೆರಳಲಿ ಕುಳಿತು ದುಡಿಯಲು
ಅಮ್ಮನಿಗಾಯಿತು ಅತೀವ ಸಂಕಟ
ಮಗಳನ್ನೊಮ್ಮೆ ತಬ್ಬಿದಳು
ನನ್ನ ಹೆಮ್ಮೆಯ ಪುತ್ರಿ ನೀನು
ದಿನವೂ ಕಳಿಸುವೆ ಓದಿಸಲು
-ಮಧುಮತಿ ಪಾಟೀಲ್
ನಮಸ್ಕಾರ,, ಸರಳವಾಗಿ ಸತ್ವಯುತ ಸಂದೇಶವನ್ನು ಕವನ ಸಾರಿದೆ,,ವಂದನೆಗಳು
ತುಂಬಾ ಅರ್ಥಪೂರ್ಣವಾದ ಸಾಲುಗಳು.ಅಮ್ಮನ ಕವನ ಮೆಚ್ಚುಗೆಯಾಯಿತು
ಬಹಳ ಅರ್ಥಪೂರ್ಣವಾದ ಕವನ.
ಸರಳ ಸಾಲುಗಳು ಅರ್ಥಪೂರ್ಣ ಕವಿತೆ.ಅಭಿನಂದನೆಳು ಮೇಡಂ.
ಸೂಪರ್
ಬಹಳ ಅರ್ಥಪೂರ್ಣವಾದ, ಮನಮುಟ್ಟುವ ಕವನ. ಧನ್ಯವಾದಗಳು ಮೇಡಂ.