ವಿಶ್ವ ಮಾನವ
ಗುರು ಪರಮಹಂಸರ ಶಿಷ್ಯ, ವಿಶ್ವ ಮಾನವ
ಸ್ವಾಮಿ ವಿವೇಕಾನಂದರಿಗೆ ಗೌರವ ನುಡಿ ನಮನ
ಯುವಪಡೆಗೆ ನಿಮ್ಮ ನುಡಿಗಳೇ ಸಾಧನ
ವಿಶ್ವ ಸಂದೇಶ ಸಾರಿದ ವೀರ ಸನ್ಯಾಸಿಯ ಚಿಂತನ
ಯುವಪೀಳಿಗೆಯ ಬಡಿದಬ್ಬಿಸಿದ ದಿವ್ಯವಾಣಿಯು
ಜನಮಾನಸ ಗೆದ್ದ ಕಂಚಿನ ಕಂಠದ ಧ್ವನಿಯು
ಮನದ ಕತ್ತಲೆಯನು ಓಡಿಸುವ ಜ್ಞಾನದೀವಿಗೆಯು
ಸಾಧನೆಯ ಮಂತ್ರ ಜಪಿಸುವ ಸಾರಥಿಯು
ಶಿಸ್ತು ಬದ್ಧ ಜೀವನಕೆ ಅಸ್ತು ಎಂದ ಶ್ರಮಿಕ
ಭಾರತದ ಕೀರ್ತಿ ಪತಾಕೆ ಎತ್ತಿ ಹಿಡಿದ ಸೇವಕ
ಧ್ಯೇಯವಾಕ್ಯದಿಂದ ಮನಗೆದ್ದ ಶ್ರೇಷ್ಠ ಚಿಂತಕ
ವಿವೇಕಾನಂದರ ಸವಿನುಡಿ ತರುಣರಿಗೆ ಅವಶ್ಯಕ
ಭಗವದ್ಗೀತೆಯ ಸಾರವನ್ನು ವಿಶ್ವಕ್ಕೆ ಹಬ್ಬಿದರು
ಸರ್ವ ಧರ್ಮ ಸಹಿಷ್ಣುತೆ ಎಲ್ಲೆಡೆ ಸಾರಿದರು
ಯುವಕರಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದರು
ಭಾರತೀಯರ ಮನದಲ್ಲಿ ಎಂದಿಗೂ ಅಮರರು
-ಆಶಾ ಅಡೂರ್,ಉಜಿರೆ
ಸೊಗಸಾದ, ಉತ್ತಮ ಸಂದೇಶಗಳಿಂದ ಕೂಡಿದ ಕವನ
ಧನ್ಯವಾದಗಳು
ಸ್ವಾಮಿ ವಿವೇಕಾನಂದರಿಗೆ ಸುಂದರ ನುಡಿ ನಮನ..ಈ ಕವನ
ನಮ್ಮ ದೇಶದ ವೀರಸನ್ಯಾಸಿ, ಸ್ವಾಮಿ ವಿವೇಕಾನಂದರ ಬಡಿದೆಚ್ಚರಿಸುವ ಸ್ಪೂರ್ತಿಯುತ, ಮಾತುಗಳು ಎಂದೆಂದಿಗೂ ಪ್ರಸ್ತುತ. .. ಸೊಗಸಾದ ಕವನ..ಧನ್ಯವಾದಗಳು ಮೇಡಂ.