ಲೆಕ್ಕಾಚಾರ
ನಿನ್ನ ಒಂದು ಛಲವಾಗಬೇಕು ಅಚಲ
ನೀನು ಬಿಡಬೇಕು ನೂರು ಆಸೆ ಚಂಚಲ
ನಡಿ ನಡಿ ಗೆಲ್ಲೋದಕ್ಕೆ ತುಳಿಬೇಕು ಸಾವಿರ ಸೋಲ
ನಿನ್ನ ಬಳಿ ಇದೆ ನೂರು ಆನೆ ಬಲ ನಡಿ ಮಲ್ಲ॥
ನಿನ್ನ ತಾಕತ್ತನ್ನು ಗುಣಿಸುತಿರು
ನಿನ್ನ ದೌಲತ್ತನ್ನು ಭಾಗಿಸುತಿರು
ನಿನ್ನ ಕೋಪ ತಾಪಗಳ ಕಳೆಯುತಿರು
ನಿನ್ನ ಸ್ನೇಹ ಪ್ರೀತಿಗಳ ಕೂಡಿಸುತಿರು॥
ನೀನು ಯೋಚಿಸುತ್ತ ಕೂತರೇ ಸೊನ್ನೆ ಅಂಶ
ನಿನ್ನ ಪ್ರಯತ್ನ ಶೂರುವಾದರೆ ತೊಂಬತ್ತ ಅಂಶ
ನಿನ್ನ ಸೋಲುಗಳು ನೂರೆಂಬತ್ತು ಅಂಶ
ನೀನು ಹಿಡಿದ ಹಠ ಇನ್ನೂರೆಪತ್ತು ಅಂಶ
ಗೆದ್ದೆ ನೋಡೀಗ ಪರಿಪೂರ್ಣ ಮೂರುನೂರರವತ್ತಂಶ॥
-ಇಂದ್ರ, ಬೆಳಗಾವಿ
ಸೂಪರ್. ಜೀವನದ ಲೆಕ್ಕಾಚಾರ ಸೊಗಸಾಗಿದೆ.
ದೃಢವಾದ ಆತ್ಮಸ್ಥೈರ್ಯ, ಮನೋಬಲದಿಂದ ಮುನ್ನಡೆಯಲು ಪ್ರೇರೇಪಿಸುವ ಸುಂದರ ಕವನ.