ಪ್ರೀತಿ ಮತ್ತು ಸಾವು
ಪ್ರೀತಿ ಮತ್ತು ಸಾವು
ಎರಡರಲ್ಲೂ ಇಲ್ಲ ಅಂತರ
ಇವೆರಡರಲ್ಲೂ ಸಮತಾಸಮಭಾವ
ಇವೆರಡಕ್ಕೂ ಇಲ್ಲ ಯಾವುದೇ ನಿರ್ಬಂಧ
ಹೊತ್ತುಗೊತ್ತು ವಯಸ್ಸು ಸ್ಥಳದ ಪರಿವಿಲ್ಲ
ಕ್ಷಣಮಾತ್ರದಲ್ಲೇ ಎಲ್ಲ
ಪ್ರೀತಿ ಹೇಳಿಕೇಳಿ ಬರುವದಿಲ್ಲ
ಯಾರ ಮೇಲೆ ಯಾವಾಗ ಪ್ರೀತಿ
ಉಕ್ಕೇರಿ ಹರಿಯುವದೋ ಗೊತ್ತಿಲ್ಲ
ಸಾವೂ ಹೀಗೇ
ಯಾವಾಗ ಯಾರ ಬೆನ್ನತ್ತಿ
ಬರುವದೋ ಅರಿವಿಲ್ಲ.
ಇವೆರಡೂ ಎಂದೂ ಸೋಲುವದೇ ಇಲ್ಲ
ಇವೆರಡರ ನಡುವಿನ ಜಿವನ
ಗೆಲ್ಲುವದೇ ರೋಮಾಂಚನ.
ಪ್ರೀತಿ ಸಾವಿಗಿಲ್ಲ ಆದಿ ಅನಂತ
ಗುರಿ ಮುಟ್ಟುವ ಛಲವೇ ಮೂಲ
ಗಮ್ಯ ತಲುಪಿದಾಗ ನಿರಾಳ
ಪ್ರೀತಿಯೇ ಆಲಯ ಸಾವೇ ಲಯ
ಇವೆರಡರ ಸಮಾನತೆಯೇ ಹಿಮಾಲಯ
ಇಲ್ಲಿ ಸೋತು ಅಲ್ಲಿ ಗೆಲ್ಲುವದೇ ಮಹಾಲಯ
– ಪ್ರಕಾಶ ದೇಶಪಾಂಡೆ, ಹುಕ್ಕೇರಿ.
ಪ್ರೀತಿ ಹಾಗೂ ಸಾವಿನ ನಡುವೆ ಇರುವ ಅಂತರವನ್ನು ಸುಂದರವಾಗಿ ವಿವರಿಸಲಾಗಿದೆ.
ಧನ್ಯವಾದಗಳು ಮೇಡಮ್ , ಕವನ ಪ್ರಕಟಿಸಿದ ಸುರಹೊನ್ನೆಗೂ ಕೂಡ.
ಪ್ರೀತಿ ಮತ್ತು ಸಾವನ್ನು ಹಿಮಾಲಯಕ್ಕೆ ಹೋಲಿಸಿ, ಕವನಕ್ಕೆ ಒಂದು ಒಳ್ಳೆಯ ರೂಪ ಕೊಟ್ಟಿದ್ದೀರಾ. ಅಭಿನಂದನೆಗಳು
ಪ್ರೀತಿ ಮತ್ತು ಸಾವು ಕವನದಲ್ಲಿ ಮನುಷ್ಯನ ಜೀವನವನ್ನು ಚೆನ್ನಾಗಿ ಅರ್ಥೈಸಿದ್ದೀರಿ….ಕವನ ಚೆನ್ನಾಗಿದೆ…. ಸರ್
ಕವಿತೆ ಸುಂದರವಾಗಿದೆ, ಪ್ರೀತಿಯೇ ಆಲಯ ಮತ್ತು ಸಾವೇ ಲಯ ಎಂದು ಹೇಳಿದಿರಿ ಅರ್ಥಪೂರ್ಣವಾಗಿದೆ
ಪ್ರೀತಿ, ಸಾವಿಗಿಲ್ಲ ಆದಿ ಅನಂತ.. ಪ್ರೀತಿಯೇ ಆಲಯ, ಸಾವೇ ಲಯ.. ಪ್ರೀತಿ, ಸಾವು ಎಂದಿಗೂ ಸೋಲುವದಿಲ್ಲ.. ಅದ್ಭುತ ಸಾಲುಗಳಿವು..! ಪ್ರೀತಿ-ಸಾವಿನ ವಿಶ್ಲೇಷಣೆ ಸುಂದರವಾಗಿ ಮೂಡಿಬಂದಿದೆ.. ಅಭಿನಂದನೆಗಳು ತಮಗೆ.
ಸೊಗಸಾದ ಅರ್ಥಪೂರ್ಣ ಕವನ
ಬದುಕಿನ ವಾಸ್ತವ ಸಾರುವ ಕವಿತೆ
ಪ್ರೀತಿಯೆ ಆಲಯ ಸಾವೆ ಲಯ…..
.ಸುಂದರ ಸಾಲುಗಳು