ಬೆಳಕು-ಬಳ್ಳಿ

ಕಾಲ ಗಣನೆ 

Share Button

ಕಾಲದ  ಸುಳಿಯಲ್ಲಿ   ಬವಳಿದ ಜೀವಕೆ
ಮೊಗೆದಷ್ಟು ನೆನಪುಗಳ ಸುಳಿ ಸುತ್ತುತ್ತಿರುವುದು
ಬೊಗಸೆತುಂಬಾ ಚಿಂತೆಗಳ ಸರಮಾಲೆಗೆ
ನೆಮ್ಮದಿಯು ಕೈ ಚೆಲ್ಲಿ ಕುಳಿತಿಹುದು

ಜೀವನದ ಪ್ರತಿಮಜಲಿನ ಆಗುಹೋಗುಗಳು
ಸಾಕ್ಷಿಯು ಕಾಲಚಕ್ರದಡಿಯಲಿ
ಹೆಜ್ಜೆಹೆಜ್ಜೆಯ ಗಳಿಕೆ ಬಳಿಕೆಗಳು
ಪರಿಶ್ರಮದ ಫಲಗಳು ಜೀವನದಲಿ

ಪರಿಧಿಯೊಳಗಿನ ಸಂಘರ್ಷದ ಮುಳ್ಳುಗಳು
ಭವಿತವ್ಯದ ಕನಸನು ಬಿಸುಟುವುದು
ಪ್ರತಿಘಳಿಗೆಯಲಿ ಸುಖವ ಅರಸುತಾ
ಶಾಂತಿಯ ಮರೆತೆವು ಈ ಭವದೊಳು

ಕಾಲಗಣನೆಯನು ಅರಿತವರು ಸಿಗದೆಮಗೆ
ಕೊಂಡೊಯ್ಯುದು ನಮ್ಮನು ಅವಿರತ ಪ್ರಯತ್ನದೆಡೆಗೆ
ಜತನಗಳೆಲ್ಲವ ಮೆಟ್ಟಿ ಆಶಾಭಾವದೆಡೆಗೆ
ಕಂದೀಲು ಹಿಡಿದು ಸಾಗಬೇಕು ಸದ್ಭಾವದೆಡೆಗೆ

– ಆಶಾ ಅಡೂರ್, ಉಜಿರೆ.

2 Comments on “ಕಾಲ ಗಣನೆ 

  1. ಆಶಾಭಾವನೆಯಿಂದ ಮುನ್ನಡೆಯುವ ಆಶಯವನ್ನು ಹೊತ್ತ ಸೊಗಸಾದ ಕವನ.

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *