ಕಾಲ ಗಣನೆ
ಕಾಲದ ಸುಳಿಯಲ್ಲಿ ಬವಳಿದ ಜೀವಕೆ
ಮೊಗೆದಷ್ಟು ನೆನಪುಗಳ ಸುಳಿ ಸುತ್ತುತ್ತಿರುವುದು
ಬೊಗಸೆತುಂಬಾ ಚಿಂತೆಗಳ ಸರಮಾಲೆಗೆ
ನೆಮ್ಮದಿಯು ಕೈ ಚೆಲ್ಲಿ ಕುಳಿತಿಹುದು
ಜೀವನದ ಪ್ರತಿಮಜಲಿನ ಆಗುಹೋಗುಗಳು
ಸಾಕ್ಷಿಯು ಕಾಲಚಕ್ರದಡಿಯಲಿ
ಹೆಜ್ಜೆಹೆಜ್ಜೆಯ ಗಳಿಕೆ ಬಳಿಕೆಗಳು
ಪರಿಶ್ರಮದ ಫಲಗಳು ಜೀವನದಲಿ
ಪರಿಧಿಯೊಳಗಿನ ಸಂಘರ್ಷದ ಮುಳ್ಳುಗಳು
ಭವಿತವ್ಯದ ಕನಸನು ಬಿಸುಟುವುದು
ಪ್ರತಿಘಳಿಗೆಯಲಿ ಸುಖವ ಅರಸುತಾ
ಶಾಂತಿಯ ಮರೆತೆವು ಈ ಭವದೊಳು
ಕಾಲಗಣನೆಯನು ಅರಿತವರು ಸಿಗದೆಮಗೆ
ಕೊಂಡೊಯ್ಯುದು ನಮ್ಮನು ಅವಿರತ ಪ್ರಯತ್ನದೆಡೆಗೆ
ಜತನಗಳೆಲ್ಲವ ಮೆಟ್ಟಿ ಆಶಾಭಾವದೆಡೆಗೆ
ಕಂದೀಲು ಹಿಡಿದು ಸಾಗಬೇಕು ಸದ್ಭಾವದೆಡೆಗೆ
– ಆಶಾ ಅಡೂರ್, ಉಜಿರೆ.
Nice
ಆಶಾಭಾವನೆಯಿಂದ ಮುನ್ನಡೆಯುವ ಆಶಯವನ್ನು ಹೊತ್ತ ಸೊಗಸಾದ ಕವನ.