ಕನ್ನಡ ನಾಡು

Spread the love
Share Button

ಕನ್ನಡ ನಾಡು ಗಂಧದ ನಾಡು
ನಿತ್ಯ ಹರಿದ್ವರ್ಣದ ಗಿರಿನಾಡು
ವಿಧ ವಿಧ ಜೀವಸಂಕುಲದ ಬೀಡು
ಹೆಮ್ಮೆಯ ನಾಡು ನಮ್ಮಯ ನಾಡು ||

ರನ್ನ, ಪಂಪ ಕವಿ ಶ್ರೇಷ್ಠರುಟ್ಟಿದ ನಾಡು
ದಾಸವೆರೇಣ್ಯರ ಜನ್ಮಭೂಮಿ  ಈ  ನಾಡು
ಜ್ಞಾನಪೀಠ ಪುರಸ್ಕೃತರ ನೆಲೆಯೂರು
ಕವಿ ಪರಂಪರೆಯ ತವರೂರು ||

ಭವ್ಯ ಕನ್ನಡ ನಾಡು ವಾಸ್ತು ಶಿಲ್ಪಗಳ ಬೀಡು
ಗುಡಿ ಗೋಪುರಗಳ ಕಲಾಕೃತಿಯ ಬೀಡು
ಬೇಲೂರು ಹಳೇಬೀಡಿನ ಸುಂದರ ಕೆತ್ತನೆಯು
ಭವ್ಯ ಪರಂಪರೆಯ ಇತಿಹಾಸಕ್ಕೆ  ಸಾಕ್ಷಿಯು ||

ಮೈಸೂರು ವೈಭವದಲಿ ನೀ ಕಂಗೊಳಿಸುತಿರುವೆ
ಹಂಪಿಯ ಸೌಂದರ್ಯದಲಿ ರಾರಾಜಿಸುತಿರುವೆ
ಬಾದಾಮಿ ಐಹೊಳೆಯು ಇತಿಹಾಸ ಮೆರೆದಿರಲು
ಗೋಳ ಗೊಮ್ಮಟಗಳು ವಿಶ್ವಕ್ಕೆ ಪ್ರಸಿದ್ಧಿ ಹಬ್ಬುತಿರಲು ||

ಕನ್ನಡ ಸಾಹಿತ್ಯದ ಪ್ರಕಾಶವು ಪಸರಿಸುತಿರಲು
ಪರಿಮಳದ ನುಡಿಗಳು ಆಲಿಸಲು ಹಿತವದು
ತನು ಮನ  ನುಡಿಯೆಲ್ಲ ಆವರಿಸುತಿರಲು
ಸಿರಿನುಡಿಯ ನಲ್ನುಡಿಗಳು ವಿಶ್ವಕ್ಕೆ ಹಬ್ಬುವುದು ||

ಕನ್ನಡಾಂಬೆಯ ಮಡಿಲಲಿ ಹಸಿರು ಚೆಲ್ಲುತಿರಲು
ಸಂಸ್ಕೃತಿ ಕಲೆಯ ಸುಗಂಧ ಬೀರುತಿರಲು
ಸಹಬಾಳ್ವೆ ಶಕ್ತಿ ಮನಸಲಿ ಒಂದುಗೂಡುತಿಹುದು
ಕನ್ನಡಾಂಬೆಯ ರಕ್ಷಣೆಯ ಹೊಣೆ ನಮ್ಮದಾಗುವುದು ||

– ಆಶಾ  ಅಡೂರ್ 

3 Responses

  1. ಶಂಕರಿ ಶರ್ಮ, ಪುತ್ತೂರು says:

    ಕನ್ನಡಾಂಬೆಗೆ ನಮನ ರೂಪದಲ್ಲಿರುವ ಸೊಗಸಾದ ಕವನ.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ. ಇಡೀ ಕರ್ನಾಟಕದ ವೈಭವ ನಿಮ್ಮ ಕವನದಲ್ಲಿ ಚಿತ್ರಿತ ಗೊಂಡಿದೆ.

  3. Savithri bhat says:

    ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: