ಐಕ್ಯತೆ ಇರಲಿ ವಿಶ್ವದಲ್ಲಿ
ಒಂದರಿಂದಾಗದು ಏನೊಂದು
ಎರಡು ಕೂಡಿದರೆ ಸಾಧ್ಯವಾಗುವುದು ಪ್ರತಿಯೊಂದು
ಒಟ್ಟಾಗಿರದಿದ್ದರೆ ಸಾಧಿಸಲಾಗದು ಏನೊಂದು
ಒಟ್ಟಾಗಿದ್ದರೆ ಸಾಧಿಸಬಹುದು ಹೊಸದೊಂದು .
ಒಗ್ಗಟ್ಟು ಬೇಕು ಮನೆಯೊಳಗೆ
ಮನದಾಳದಿಂದ ನೆರೆ – ಹೊರೆಯೊಳಗೆ
ಬೇಧ – ಭಾವ ಬೇಡ ಸಮಾಜದೊಳಗೆ
ಭ್ರಾತೃತ್ವ ಭಾವನೆ ಇರಲಿ ಮನದೊಳಗೆ .
ಎಲ್ಲಾ ಒಂದೇ ಎಂಬ ಮಂತ್ರದಲ್ಲಿ
ಶಾಂತಿ ಸಿಗುವುದು ಸಮಾಜದಲ್ಲಿ
ಐಕ್ಯತೆ ಇದ್ದರೆ ದೇಶದಲ್ಲಿ
ಸಾಧಿಸಬಹುದು ವಿಶ್ವದಲ್ಲಿ .
– ಮೇಘನ ಪ್ರಶಾಂತ್ ಹೊಳ್ಳ , ಬೈಪಾಡಿ
ಇವತ್ತಿನ ಅಗತ್ಯ ಇದು. ಉತ್ತಮ ಸಂದೇಶವನ್ನೊಳಗೊಂಡ ಕವನ.
ಒಗ್ಗಟ್ಟು, ಐಕ್ಯತೆಗಳ ಅಗತ್ಯತೆಗಳನ್ನು ಮನದಟ್ಟು ಮಾಡುವ ಚಂದದ ಕವನ.