ವೃದ್ದಾಪ್ಯ ನೋವು
ಹಿರಿಯ ಜೀವ ಎಂದೆನ್ನದೆ
ಹೊರಗಟ್ಟುವರು ಈ ಜಗದಿ
ಅರಿಯಬೇಕು ಮುಂದೆ
ಕಾಲಚಕ್ರವು ಉರುಳುವುದೆಂದು
ಮರೆತು ಹೋಯಿತೇ ಬಾಲ್ಯದಿ
ತೋರಿದ ಪ್ರೀತಿ ವಾತ್ಸಲ್ಯ
ಮನಸಲಿ ಅಳಿದೇ ಹೋಯಿತೇ
ಅವರ ಶ್ರಮದ ಕಷ್ಟ – ಕಾರ್ಪಣ್ಯ
ಸ್ವಾರ್ಥ ಲಾಲಸೆಯ ಈ ಬದುಕಲಿ
ಮರೆಯಬೇಡ ಹೆತ್ತವರ ಮಂದಹಾಸ
ತೆರೆದಿಡು ಹೃದಯದ ಕಣ್ಣನು
ತಿಳಿಯಲಿ ಹಿರಿಯ ಜೀವದ ನೋವಿನ ಪ್ರಯಾಸ
ಸಮಯವೂ ಸರಿದಂತೆ
ಜೀವನದ ಪರಿಸ್ಥಿತಿ ಬದಲಾದರು
ಮಾನವೀಯತೆಯನ್ನು ಬಿಡಬಾರದು
ಮೂಲವನು ಎಂದೂ ಮರೆಯಬಾರದು
-ಆಶಾ ಅಡೂರ್
Kawanawu shabdashaha arthapoornawagide,
Ellaroo hagiruwadila,. Kelawu Makkalu Tamma
Makkaliginta Hechchu Chennagi Hettawarannu
Nodikollywa Sakashu Janariddare,.
Udaharanege Nawe 75 Warshada Wruddha Dampatigalu…,
R.K.Nadgir , hubballi.
ಧನ್ಯವಾದಗಳು ಸರ್… ಸಂತೋಷವಾಯಿತು ಸರ್ ಕೇಳಿ…
ವೃದ್ದಾಶ್ರಮದ ಸಂಖ್ಯೆ ಹೆಚ್ಚುತಿರುವ ಬಗ್ಗೆ ನಾನು ಜನರಲ್ ಆಗಿ ಬರೆದಿದ್ದೇನೆ ಸರ್..
ಸೊಗಸಾದ ಕವನ. ಇವತ್ತು ನಮ್ಮ ಹಿರಿಯರು ಇರುವ ಸ್ಥಿತಿ ನಾಳೆ ನಮಗೂ ಬರಲಿದೆ ಅನ್ನುವ ಸತ್ಯವನ್ನು ಯಾವತ್ತೂ ಮರೆಯಬಾರದು ಅನ್ನುವ ಸಂದೇಶ ನೀಡುವ ಸಾಲುಗಳು ಇಷ್ಟವಾದವು
ಧನ್ಯವಾದಗಳು ಮೇಡಂ
ಮನೆಯ ಹಿರಿಯರನ್ನು ಕಡೆಗಣಿಸಬಾರದೆಂಬ ಕಿವಿಮಾತು ತುಂಬಿದ ಕವನ ಸೊಗಸಾಗಿದೆ.
ಮನೆಯ ಹಿರಿಯರನ್ನು ಕಡೆಗಣಿಸಬಾರದೆಂಬ ಕಿವಿಮಾತು ತುಂಬಿದ ಕವನ ಸೊಗಸಾಗಿದೆ.
ಒಳ್ಳೆಯ ಕವಿತೆ