ಅಂತರಂಗ
ಕೈಹಿಡಿದೆ ನಾ ವೃತ್ತಿ ವೈದ್ಯಕೀಯ
ಸೇವಾ ಮನೋಭಾವವೇ ಸಂಪ್ರದಾಯ
ನಿಸ್ವಾರ್ಥಸೇವೆಯ ತನಿ ಎರೆಯುತ್ತ ಬಂದ ಪೀಳಿಗೆಯ
ಮಾನವೀಯತೆ ಮರೆತು ಶಿಕ್ಷಿಸುವುದು ಈಗಿನ ವಾಡಿಕೆಯಾ?
ಕಟ್ಟಿರುವೆ ನಾ ಕೊಡಲು ರೋಗ ರುಜಿನಕ್ಕೆ ಪರಿಹಾರ ಒಂದು ದೇವಾಲಯ
ಅಲ್ಲಿ ಸಾವು ನೋವು ವಿಧಿನಿಯಮದಂತೆ ಸಂಭವನೀಯ
ಆದರೂ ಛಲಬಿಡದ ತ್ರಿವಿಕ್ರಮನಂತೆ ರಕ್ಷಿಸಲು ಪ್ರಯತ್ನ ಮೊದಲಿನಿಂದ ಕಟ್ಟಕಡೆಯ
ಹುಸಿಯೋ ದಿಟವೋ ಕೇಳಿ ನಿಮ್ಮ ಆತ್ಮಸಾಕ್ಷಿಯ!
ನನ್ನಲ್ಲಿಲ್ಲ ಎಳ್ಳಷ್ಟೂ ನಾ ಆಗಬೇಕೆಂದು ಜನಪ್ರಿಯ
ನನಗೆ ದುಡ್ಡೇ ದೇವರು ಎಂಬ ಆರೋಪ ಅಭಿಪ್ರಾಯ
ನನ್ನ ಅಂತರಂಗ ಅರಿಯಲಾರಿರಿ ಹುಡುಕಾಡಿದರೂ ವಿಕಿಪೀಡಿಯ
ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಹೇಳಿದಂತಿದೆ ವಿದಾಯ!
-ಲತಾಪ್ರಸಾದ್
ವಾಸ್ತವ. ದೇವರೆಂದೇ ನಂಬುವ ವೈದ್ಯರಿಗೂ ಒಂದು ಮನಸಿದೆ, ಅದನ್ನು ಅರಿಯುವ ಪ್ರಯತ್ನ ಮಾಡಿ ಅನ್ನುವ ಸಂದೇಶ. ಚೆನ್ನಾಗಿದೆ ಸಾಲುಗಳು.
ವೈದ್ಯಕೀಯ ವೃತ್ತಿಯ ಬಗೆಗಿನ ಅಂತರಂಗದ ಮಾತುಗಳ ಸಾಲುಗಳು ಮನಮುಟ್ಟುವಂತಿವೆ. ವಾಸ್ತವಿಕತೆಗೆ ಹಿಡಿದ ಕನ್ನಡಿಯಾಗಿದೆ ನಿಮ್ಮ ಕವಿತೆ.. ಧನ್ಯವಾದಗಳು ಮೇಡಂ.