ಆಗಸದಷ್ಟು ಹರವು
ಮನೆಯಮುಂದೆ ರಂಗೋಲಿಯಂತೆ
ಮುಗ್ಧವಾಗಿ
ಯಾವುದೇ ಮಾತಿಗು ಕಿರುನಗೆಯನ್ನೇ
ಉತ್ತರನೀಡುತ್ತೀಯ
ತೋಟಗಳಲ್ಲಿ ತಿರುಗಾಡುತ್ತಾ
ಕುಸುಮ ಲಾಲಿತ್ಯವನ್ನು
ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೀಯ
ಇಡೀ ಜೀವನಕ್ಕಾಗುವಷ್ಟು
ನಿನ್ನದೊಂದು ಪುಟ್ಟ ಪ್ರಪಂಚವೆಂದು
ಮತ್ತಾವುದೋ ದೊಡ್ಡ ಪ್ರಪಂಚವನ್ನು ತಿಳಿಯಬೇಕೆಂದು
ಸುದೀರ್ಘ ಪಯಣಕ್ಕೆ ಮುಂದಾಗುತ್ತೀಯ
ಬೆಳಕನ್ನು ಜೊತೆಯಾಗಿಸಿಕೊಂಡು ತಾರೆಗಳ ಆಸರೆಯಿಂದ…
ಆಗಸದಷ್ಟು ಹರವಿನೊಂದಿಗೆ
ದಿಗಿಲಿನ ಸುತ್ತೂ ಬೇಲಿಯ ಹಾಕಿ
ಸಂಭ್ರಮದಿಂದ ಮುನ್ನಡೆಯುತ್ತೀಯ
ಆನಂದದ ದ್ವೀಪಗಳೊಳಗೆ..
ತೆಲುಗು ಮೂಲ : ಲಕ್ಷ್ಮಿ ಕಂದಿಮಳ್ಳ
ಅನುವಾದ : ರೋಹಿಣಿಸತ್ಯ
ಚಂದದ ಅನುವಾದ ಕವನ.ಅಭಿನಂದನೆಗಳು.ಮೇಡಂ.
ಚಂದದ ಕವನ
ಅನುವಾದಿತ ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಚಂದದ ಕವಿತೆಯನ್ನು ಅಷ್ಟೇ ಸುಂದರವಾಗಿ ಅನುವಾದಿಸಿದ್ದೀರಿ
ಅಭಿನಂದನೆಗಳು