ನಾಗಲೋಟ…

Share Button

ಅಲೆಗಳ ಓಟವ ಎಣಿಸೀ
ಗುಣಿಸೀ ಲೆಕ್ಕ ಹಾಕುವ
ಆ ಹುಡುಗಿಗೆ ತನ್ನದೇ
ಎದೆ ಬಡಿತದ ದನಿ ಇಷ್ಟು
ಹೆಚ್ಚಿದ್ದು ಯಾವಾಗೆಂದು
ಅವನ ಬಳಿ ನಿಂತಾಗ
ಲೆಕ್ಕ ಸಿಗಲಿಲ್ಲ..

ಸಿಕ್ಕ ಅವಕಾಶದಲಿ ಅಂಗೈ
ರೇಖೆಯ ಮೇಲೆ ದಾರಿ
ತೋರಿ ನಾಳೆ ಈ ಹಾದಿಯಲಿ
ನಡೆಯೋಣ ಎಂದವನ
ಪಿಸುಮಾತು ಆ ಲೆಕ್ಕ
ತಪ್ಪಿಸಿತ್ತು…

ಕಣ್ಣೊಳಗೆ ಏನನ್ನೋ,
ತನ್ನದೇನನ್ನೋ ಬಚ್ಚಿಟ್ಟವನ
ಹಾಗೆ ಹುಡುಕಾಡಿದ ಅವನು
ಅಂದಾಜು ಸಿಗದಂತೆ ಈಕೆಯ
ನೋಟ ಬದಲಾಯಿಸಿದ್ದ..

ಈಕೆಯ ಉಸಿರಲ್ಲೂ
ಬೆರೆತು ಹೋಗಿದ್ದ ಅವನ
ಸುಗಂಧವನ್ನೇ ಸದಾ
ಆಘ್ರಾಣಿಸುತ್ತಾ ಮತ್ತೇರಿಸಿ
ಕೊಂಡ ಇವಳು ಇಡಿಯಾಗಿ
ಆವಿಯಾಗಿ ಹೋಗಿದ್ದಳು..

ಈ ಬಡ ಹುಡುಗಿಗೆ ಆತನ
ರಾಜಕುವರಿಯಾಗುವ ಭಾಗ್ಯ.
ಕಿರೀಟ ಧಾರಣೆ ಇಲ್ಲದೆ
ಅರಮನೆ ಸಿಂಹಾಸನಗಳಿಲ್ಲದೇ
ಬರಿಯ ಮುತ್ತಿನಲಂಕಾರದಲಿ
ಮೆರವಣಿಗೆ ಆಗುತ್ತಿತ್ತು..

ಈಗ ಈ ಹುಡುಗಿ
ಜಗತ್ತಿನ ಶ್ರೀಮಂತಿಕೆಯ
ಮೇರುಪರ್ವತ ಏರಿನಿಂತು
ಕಡಲ ಅಲೆಗಳನೂ, ಗಾಳಿ
ಬೀಸಿನ ನಿಯತವನೂ
ಲೆಕ್ಕ ತಪ್ಪಿಸಿ; ದಿಕ್ಕುಗೆಡಿಸಿ
ಮೋಹಕವಾಗಿ ಓಡುತ್ತಿರುವ
ನಾಗಾಲೋಟದ ಅಶ್ವಾರೋಹಿ.

-ವಸುಂಧರಾ ಕದಲೂರು

5 Responses

  1. ನಯನ ಬಜಕೂಡ್ಲು says:

    Nice one

  2. Tazira says:

    ಪ್ರತಿಯೊಬ್ಬ ಹುಡುಗಿಯ ಆಸೆಗಳ ಗೂಡಿನಲ್ಲಿ ಬಚ್ಚಿಟ್ಟ ಗುಬ್ಬಚ್ಚಿ…… ಬಹುತೇಕ ಹೆಣ್ಣುಗಳ ಗತವೈಭವದ ನೆನಪುಗಳ ಪುಲಕ… ಬೆಚ್ಚಗಿನ ಕಚಗುಳಿಗಳಿಗೆ ಎಣೆಯುಂಟೇ..?

  3. ಶಂಕರಿ ಶರ್ಮ says:

    ಭಾವನೆಗಳ ನಾಗಾಲೋಟ.. ಚೆನ್ನಾಗಿದೆ.

  4. km vasundhara says:

    ಪ್ರಕಟಿಸಿದ ಸುರಹೊನ್ನೆಗೆ ಹಾಗೂ ಪ್ರತಿಕ್ರಿಯಿಸಿದ ಸಹೃದಯರಿಗೆ ಧನ್ಯವಾದಗಳು.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: