ರಕ್ಷಾ ಬಂಧನ
ಅಗ್ನಿಸಾಕ್ಷಿಯಾಗಿ ಪತಿಯ ಕೈಹಿಡಿದು
ಅತ್ತೆಮನೆಗೆ ಹೋಗುವವರೆಗೆ
ಆಸರೆಯಾಗಿ ನಿಂತು
ಅಕ್ಕರೆಯ ತೋರಿದ
ಆಪತ್ಕಾಲದ
ಆಪದ್ಬಾಂಧವರಾದ
ಅಣ್ಣತಮ್ಮಂದಿರ
ಅಭಯಹಸ್ತಕ್ಕೆ
ಅನುಬಂಧದ ದಾರ ಬೆಸೆದು
ಆರತಿ ಬೆಳಗಿ
ಅಕ್ಕತಂಗಿಯರು ನಾವು
ಅಂತಃಕರಣಪೂರ್ವಕವಾಗಿ
ಆಚರಿಸುವೆವು
“ರಾಖಿ”ಹಬ್ಬವಾ…
“ಸರ್ವರಿಗೂ ರಾಖಿ ಹಬ್ಬದ ಶುಭಾಶಯಗಳು”
-ಮಾಲತೇಶ ಹುಬ್ಬಳ್ಳಿ
Very nice
ಹಬ್ಬಕ್ಕೆ ಹೊಸರೀತಿಯ ಕವನ..ಶುಭಾಶಯಗಳು.
Samayochit, Sachitra, sundar Salugalannu Sarala reetiyalli sahodarige Samarpisiddannu savidewu.
Sahodara Ranganna Nadgir