ಭಿನ್ನರಾಗ

Share Button

ಶ್ರಮಿಸಿದ ತ್ಯಾಗಜೀವಿಗಳಿಗೊಂದು ಧನ್ಯತೆಯ ಚಪ್ಪಾಳೆ;
ತೀರದ ಗುರಿಯತ್ತ ನಡೆದು ನಡೆದು ಕಾಲೆಲ್ಲ ಹೊಪ್ಪುಳೆ.

ವಿಷವೈರಿಯ ಹೊಡೆದೋಡಿಸಲು ಹಚ್ಚಿ ಒಂದು ದೀಪ;
ನೆಲೆ ಕುಸಿದ ಬಾಳಿದು,ನಮಗೆ ಇದಾವ ಜನ್ಮದ ಶಾಪ.
.
ರೋಗಾಣು ಹತ್ತಿರವಾದೀತು ಇರಲಿ ಒಂದಿಷ್ಟು ಅಂತರ;
ಅನ್ನದ ತಟ್ಟೆಗೂ ನಮ್ಮ ಹೊಟ್ಟೆಗೂ ದೂರ ಬಲು ದೂರ.

ಶುದ್ಧವಿರಿ  ,ಕೈಗಳ ತೊಳೆಯಿರಿ ಅರೋಗ್ಯವೇ  ದೇವರು;
ಮೈಲುದೂರ ನಡೆದರೂ ಸಿಗದು ಒಂದು ಲೋಟ ನೀರು.

ಅಟ್ಟದಿಂದಿಳಿದವು ,ಹಲಗುಳಿಮಣೆ, ಪಗಡೆಹಾಸುಗಳು
ದಾಳ ಎಸೆವರ ಮರ್ಜಿಗೆ ಸಿಕ್ಕ ಕಾಯಾಗಿದೆ  ನಮ್ಮ ಬಾಳು

ಕೇಳಿಸಿತು  ಕೋಗಿಲೆದನಿ,ತಾರಸಿ ಮೇಲೆ ಕುಣಿದುದು   ನವಿಲು;
ಕಣ್ಣು,ಕಿವಿಗೆ ಕೆಲಸ ನೀಡುವಂತಿಲ್ಲ ಚಲಿಸಬೇಕಿದೆ ಕಾಲು.

ಅಂತ್ಯವಾಗಬಾರದೆ ಬೇಗ ಈ ಗೃಹಬಂಧನದ ಬೇಸರ;
ಎಂದು ಹೊಕ್ಕೀವಿ ಮನೆಗೆ  ಎಂಬುದೇ ನಮ್ಮ ಕಾತರ.

-ಮಹಾಬಲ

3 Responses

  1. ರತ್ನಾ says:

    ಸುನೀತ ಕವಿಗಳಿಂದ ಅತ್ಯಂತ ಸಾಂದರ್ಭಿಕ, ಹಾಗೂ ಎಲ್ಲರ ಮನದಾಳದ ಆರ್ತ ಪ್ರಾರ್ಥನೆ ಎನ್ನಬಹುದಾದ ಸುನೀತ.
    ಬೇಗ ಈಡೇರಲಿ. ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ಸೂಪರ್ ಸರ್. ವಾಸ್ತವದ ಚಿತ್ರಣ ಬಹಳ ಚೆನ್ನಾಗಿ ವಿವರಿಸಿರುವಿರಿ.

  3. ಶಂಕರಿ ಶರ್ಮ says:

    ಸಕಾಲಿಕ ಕವನ ಸದ್ಯದ ಸಂಗತಿಯನ್ನು ಬಿತ್ತರಿಸುತ್ತಿದೆ. ಬಿಡುಗಡೆಗಾಗಿ ಕಾಯುತ್ತಿರುವ ಪ್ರತಿಯೊಬ್ಬರ ಮನದಾಳದ ಆಶಯ ಬಿಂಬಿತ ಸೊಗಸಾದ ಕವಿತೆ.. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: