ಲಹರಿ

ಅಮ್ಮ ಎಂಬ ಅಗಾಧಶಕ್ತಿ..

Share Button

‘ಅಮ್ಮ ತಾಯಿ ನಿನ್ನ ಮಡಿಲಲ್ಲಿ ಕಣ್ಣು ತೆರೆದ ಕ್ಷಣದಲ್ಲಿ ಸೂತ್ರವೊಂದು ಬಿಗಿಯಿತ್ತು. ಸಂಬಂಧದ ನೆಪದಲ್ಲಿ ‘ ಎನ್ನುವ ಭಾವಗೀತೆಯು ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ. ಅಮ್ಮಾ ಅಂದ್ರೆ ಅದೊಂದು ಅದ್ಭುತ ಶಕ್ತಿ. ನಿಸರ್ಗದ ಎಲ್ಲಾ ಶಕ್ತಿಗಳ ಚೇತನ ಎಂದು ಒತ್ತಡ ಚೆಲುಮೆ. ಹುಟ್ಟಿದ ಕ್ಷಣದಿಂದ ಮರಣದವರೆಗೂ ನಮ್ಮೆಲ್ಲ ನೋವು – ನಲಿವುಗಳಿಗೆ ಸದಾ ಸ್ಪಂದಿಸುತ್ತಾ, ಸೋತಾಗ  ಉತ್ಸಾಹ ತುಂಬುತ್ತಾ, ಗೆದ್ದಾಗ ಕಣ್ಣಿನಂಚಿನಲ್ಲಿ ಖುಷಿ ಪಡುತ್ತಾ ತನ್ನ ಎಲ್ಲಾ ನೋವನ್ನು ಮಕ್ಕಳ ಮುಗ್ಧಮುಖ ನೋಡುತ್ತಾ ಅವರ ಆಟ -ಪಾಠಗಳಲ್ಲೇ ತನ್ನ ಕಾಲ ಕಳೆಯುತ್ತಾ, ನೋವು ಮರೆತು ಆ ಸಂತೋಷವೆಂಬ ಅಮೃತದ ಸವಿಯನ್ನು ಉಣಬಡಿಸುತ್ತಾಳೆ.   ಅಮ್ಮ ಪ್ರತಿಯೊಬ್ಬರಿಗೂ ತನ್ನ ತಾಯಿಯೇ ಮೊದಲು ಗುರು, ಮೊದಲ ಗೆಳತಿಯಾಗಿರುತ್ತಾಳೆ. ಹಾಗೆಯೇ ನನಗೂ ಕೂಡ ನನ್ನ ತಾಯಿಯೇ ಗುರು.

ನನ್ನಮ್ಮಾ ಸಂಸಾರದಲ್ಲಿ ಸಾಕಷ್ಟು ಏಳು – ಬೀಳನ್ನು ನೋಡಿದ್ದಾಳೆ. ತನ್ನ ಪತಿಯ ಅನಾರೋಗ್ಯದಲ್ಲಿದ್ದಾಗ ಕ್ಷಮಯಾ ಧಾತ್ರಿಯಾಗಿ,  ರೂಪೇಶು ದಾಸಿಯಾಗಿ, ಆತನ ಸೇವೆ ಮಾಡಿದ್ದಾಳೆ. ಎಂದೂ ಕೂಡ ಬೇಸರ ಮಾಡಿಕೊಂಡಿಲ್ಲ ಮಗುವಿನ ರೀತಿ ಸಲಹಿದ್ದಾಳೆ. ತನ್ನ ಪತಿಯು ತೀರಿಕೊಂಡಾಗ ಗಟ್ಟಿಗಿತ್ತಿಯಾಗಿ, ಮಕ್ಕಳಗಾಗಿ ಗಟ್ಟಿಯಾಗಿ ನಿಂತು. ನನ್ನ & ನನ್ನ ಸಹೋದರನನ್ನು ಧೈರ್ಯದಿಂದ ಬೆಳೆಸಿ, ಅಪ್ಪ – ಅಮ್ಮ ಎರಡು ಪತ್ರಗಳನ್ನು ಅವರೊಬ್ಬರೇ ನಿಭಾಯಿಸಿದ್ದಾರೆ. ಹಣಕಾಸಿನ ವಿಷಯವಾಗಲಿ, ಮನೆ ನಿಭಾಯಿಸುವುದರಲ್ಲಿ ಆಗಲಿ, ನಮ್ಮನು ಬೆಳೆಸುವುದರಲ್ಲಿ ಆಗಲೀ ಎಲ್ಲಾ  ರಾಜೀ ಮಾಡಿಕೊಳ್ಳದೇ ಎಲ್ಲ ಸಂಪೂರ್ಣ ಜವಾಬ್ದಾರಿಯನ್ನು ತಾನೊಬ್ಬಳೆ ನಿಭಾಯಿಸಿದ್ದಾರೆ.

ಇಂದು ನಾನು ಮತ್ತು ನನ್ನ ಸಹೋದರ ಈ ಮಟ್ಟಕ್ಕೆ ಬೆಳೆಯಬೇಕಾದರೆ ಆಕೆಯ ಶ್ರಮ, ಆಕೆಯ ಹಾರೈಕೆಯೇ ಕಾರಣ. ಎಂದೂ ನಮ್ಮ ಕಾರ್ಯಕ್ಕೆ ಅಡ್ಡಿ ಪಡಿಸದೇ,  ಏನಾದರು ಸಾಧಿಸಬೇಕೆಂದು ಪ್ರೇರೇಪಿಸಿದ್ದಾರೆ. ಆಕೆಯ ಮಾತುಗಳಿಂದಲೇ  ಇಂದು ನಾನು  ಮತ್ತು ನನ್ನ ಸಹೋದರ ನಮ್ಮದೇ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ.

ಆಕೆಗೆ ಇದೋ ನನ್ನದೊಂದು ನುಡಿ ನಮನ.

-ವಿದ್ಯಾ ಶ್ರೀ. ಬಿ. ಬಳ್ಳಾರಿ.

 

   

2 Comments on “ಅಮ್ಮ ಎಂಬ ಅಗಾಧಶಕ್ತಿ..

  1. ಬಹಳ ಚೆನ್ನಾದ ನುಡಿ ನಮನ..ಅಮ್ಮನಿಗೆ ತಲುಪಲಿ

  2. ತಮ್ಮ ಭಾವಪೂರ್ಣ ನುಡಿನಮನ ಮನತಟ್ಟಿತು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *