ಅವಳ ದಿನಚರಿ
.
ಇಡದೆ ಅಲಾರಾಂ
ಏಳುವವಳು ನಸುಕಿನಲ್ಲಿ
ಎಚ್ಚರಿಸದೆ ನಮ್ಮನ್ನು
ತೊಡಗಿಸಿಕೊಳ್ಳುವವಳು ಕೆಲಸದಲ್ಲಿ
ಎಲ್ಲವೂ ಆದ ಮೇಲೆ
ನಮಗೆಲ್ಲಾ ಬೆಳಗಾಗುವುದು
ಅವಳ ದಿನಚರಿ
ಆಯಾಸವಾದರೂ ಬದಲಾಗದು
ದಿನಕ್ಕೊಂದು ತರಹ ತಿಂಡಿ
ಸಿದ್ಧ ತಯಾರಾಗಿ ಬರುವಷ್ಟರಲ್ಲಿ
ಭಾನುವಾರವಾದರೂ ಹುಣ್ಣಿಮೆಯೆಂದರೂ
ಮಗ್ನಳು ನಮ್ಮ ಯೋಗಕ್ಷೇಮದಲ್ಲಿ
ಬೇಸರವೇ ಆಗದು ಅವಳಿಗೆ
ಗೊಣಗಾಡಿದರೂ ಲಾಲಿ ಹಾಡೆನಿಸುವುದು
ನಮ್ಮದೇ ಚಿಂತೆ ಅನುಕ್ಷಣವೂ
ನಕ್ಕರವಳು ಸುಗ್ಗಿ ಶುರುವಾಗುವುದು
ತಪ್ಪು ಮಾಡಿದರೆ
ಗದರಿಸಿ ತಿಳಿ ಹೇಳುತ್ತಲೇ
ಮುದ್ದಾಡಿ ಸಲುಹಿ
ಪ್ರೋತ್ಸಾಹಿಸುವಳು ಬೆನ್ನು ತಟ್ಟುತ್ತಲೇ
ಹೋದಲ್ಲಿ ಬಂದಲ್ಲಿ
ದೊಡ್ಡವನಾದರೂ ಹೇಳುವಳು ಜೋಪಾನ
ನಮ್ಮ ಆರೈಕೆಗೆ
ಎಂದು ಅವಳ ಗಮನ
ಎಷ್ಟೊಂದು ಕೈಗಳು ದೇವರಿಗೆ
ಇದ್ದರೂ ಎರಡೇ ಕೈಗಳು
ಹತ್ತಾರು ಕೆಲಸ ಒಮ್ಮೆಗೆ
ನಿರ್ವಹಿಸುವ ನಿಪುಣಳು
ಎಷ್ಟು ಹೇಳಲಿ
ಏನೆಂದು ಹೊಗಳಲಿ
ಜಗವೇ ಅಂಗೈಯಲ್ಲಿ
ಅಮ್ಮ ಇರಲು ಜೊತೆಯಲ್ಲಿ
-ಬಸವರಾಜ ಕಾಸೆ
ಅಮ್ಮನ ದಿನಚರಿ ಚೆನ್ನಾಗಿ ಬರೆದಿರಿ..ನಿಮ್ಮ ಅಮ್ಮನೊಂದಿಗಿನ ಪ್ರೀತಿ ಅಭಿಮಾನ ಹೀಗೆ..ಇರಲಿ..
ಅಮ್ಮನ ಮೇಲಿನ ಅಭಿಮಾನ, ಪ್ರೀತಿ ಹೊರಸೂಸುತ್ತಿರುವ ಸೊಗಸಾದ ಕವಿತೆ.
ಸುಪೆರ್ ್AMMANANU ಹೊಗಳು ಪದಗಳು saladu