ಏಕತರಕಾರಿ ಅಡುಗೆ - ಸೂಪರ್ ಪಾಕ

ಬಾಳೆಕಾಯಿಯ ಬಗೆ ಬಗೆ ಅಡುಗೆ

Share Button
.
ಬಾಳೆ ಸಾದಾರಣ ಸಣ್ಣ ಹಿತ್ತಿಲು ಮನೆ ಇದ್ದವರೂ ನೆಟ್ಟು ಬೆಳೆಸಬಹುದು ಹಾಗೂ ಬೆಳೆಸುತ್ತಾರೆ. ಆದ್ದರಿಂದ ಬಾಳೆಕಾಯಿಯಿಂದ ಮಾಡಬಹುದಾದ ಅಲ್ಲದೆ ಅತಿಕಡಿಮೆ ಖರ್ಚಿನಲ್ಲಾಗುವ ಕೆಲವು ಅಡುಗೆಗಳನ್ನು ಇಲ್ಲಿ ಹೇಳ್ತೇನೆ.
1. ಬಾಳೆ ಕಾಯಿ ಪಲ್ಯ, 2.ಬಾಳೆಕಾಯಿ ಸಾಸಿವೆ, 3.ಬಾಳೆಕಾಯಿ ಹುಳಿಗೊಜ್ಜು, 4.ಬಾಳೆಕಾಯಿ ಮಜ್ಜಿಗೆ ಹುಳಿ,   5.ಬಾಳೆಕಾಯಿ ಸಾಂಬಾರು,6.ಬಾಳೆಕಾಯಿ ಮೆಣಸುಕಾಯಿ, 7.ಬಾಳೆಕಾಯಿ ಜೀರಿಗೆಕೂಟು.
ಮಾಡುವ ವಿಧಾನ:-ಬಾಳೆಕಾಯಿಯ ಪಲ್ಯ,ಸಾಂಬಾರು, ಮಜ್ಜಿಗೆ ಹುಳಿ ಸಾದಾರಣ ಎಲ್ಲಾ ಮಹಿಳೆಯರಿಗೆ ಗೊತ್ತಿರಬಹುದು ಮಿಕ್ಕೆಲ್ಲ ಐಟಮ್ಸ್ ಕೆಳಗೆ ನಮೂದಿಸುತ್ತೇನೆ ಅಕ್ಕ+ ತಂಗಿಯರೆ..
 *ಬಾಳೆಕಾಯಿಯ ಸಾಸಿವೆ*-ಸಣ್ಣಗೆ ಹೆಚ್ಚಿದ ಹೋಳಿಗೆ ಹುಳಿ,ಉಪ್ಪು, ಒಂದು ಚೂರು ಬೆಲ್ಲ ಹಾಕಿ ಹೋಳನ್ನು ಬೇಯಿಸಿ; ತಣಿದ ಮೇಲೆ ಸ್ವಲ್ಪ ತೆಂಗಿನತುರಿಗೆ ಸಾಸಿವೆ,ಒಂದು ಒಣಮೆಣಸು ಹಾಕಿರುಬ್ಬಿ ;

ಬೇಯಿಸಿದ ಹೋಳಿಗೆ ಬೆರೆಸಿ ಹದಕ್ಕೆ ಕದಡಿಸಿದರೆ ರೆಡಿ.

*ಹುಳಿಗೊಜ್ಜು*:-ಬಾಳೆಕಾಯಿಹೋಳನ್ನು ಅತೀ ಸಣ್ಣಗೆ ಹೆಚ್ಚಿ;ಹುಳಿ,ಬೆಲ್ಲ, ಉಪ್ಪು,ಮೆಣಸಿನಪುಡಿ ಹಾಕಿ ಚೆನ್ನಾಗಿ ಬೇಯಿಸಿ (ಪಾಕ ತುಂಬಾ ನೀರಾಗಬಾರದು)ಇಂಗು ಅಥವಾ ಬೆಳ್ಳುಳ್ಳಿಯ ಒಗ್ಗರಣೆ ಕೊಡಿ.

*ಬಾಳೆಕಾಯಿಯ ಜೀರಿಗೆ ಕೂಟು*:- ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ, ಉಪ್ಪು,ಹುಳಿ,ಹಾಕಿ ಬೇಯಿಸಿ(ಇದಕ್ಕೆ ಬೆಲ್ಲಬೇಡ). ತೆಂಗಿನಕಾಯಿಯ ತುರಿಯನ್ನು ರುಬ್ಬಿ, (ತುಂಬಾ ನಯಬೇಡ)ಮಿಕ್ಸಿಜಾರಿನಿಂದ ಇಳಿಸುವ ಮೊದಲು ಚೂರು ಜೀರಿಗೆ, ಎರಡು ಕಾಯಿಮೆಣಸು ಹಾಕಿ ಎರಡು ಸುತ್ತು ತಿರುಗಿಸಿ  ಬೆಂದಹೋಳಿಗೆ ಬರೆಸಿ ಒಂದು ಸೌಟು ಮಜ್ಜಿಗೆ ಅಥವಾ ಮೊಸರು ಬೆರೆಸಿ; ಬೇವಿನ ಒಗ್ಗರಣೆ ಕೊಡಿ.*ಬಾಳೆಕಾಯಿ ಮೆಣಸುಕಾಯಿ:-* ಬಾಳೆಕಾಯಿಯನ್ನು ಸಣ್ಣಹೋಳಾಗಿ ಕತ್ತರಿಸಿ, ಉಪ್ಪು,ಹುಳಿ, ಬೆಲ್ಲ  ಅರಸಿನಪುಡಿ ಹಾಕಿ ಬೇಯಿಸಿ. ಈ ಬೆಂದ ಹೋಳಿಗೆ ಒಣಮೆಣಸು, ಚೂರುಮೆಂತೆ, ಒಂದು ಹಿಡಿ ಎಳ್ಳನ್ನು ಎರಡುಸ್ಪೂನ್ ಎಣ್ಣೆ ಹಾಕಿ ಎಳ್ಳು ಚೂರು ಚಟಚಟ ಹೇಳುವಾಗ ಇಳಿಸಿಕೊಂಡು ಸ್ವಲ್ಪ ತೆಂಗಿನಕಾಯಿ ತುರಿಯೊಂದಿಗೆ ಮಿಕ್ಸಿಯಲ್ಲಿ ಅರೆಯಿರಿ. ಈ ಪಾಕವನ್ನು ಬೆಂದ ಹೋಳಿಗೆ ಬೆರೆಸಿ ಸಾಂಬಾರಿನ ಹದದಂತೆ ಮಾಡಿ ಕುದಿದಾಗ ಇಳಿಸಿ ಬೇವಿನೊಗ್ಗರಣೆ ಕೊಡಿ. ಇದು ಬಹು ಸ್ವಾದಿಷ್ಟ ವ್ಯಂಜನ.ಎರಡು ದಿವಸ ಇಟ್ಟರೂ  ತಾಜಾ ಇದ್ದು ಊಟಕ್ಕಲ್ಲದೆ, ಇಡ್ಳಿ,ದೋಸೆಗೂ ಬೆರಸಬಹುದಾಗಿದೆ.

– ವಿಜಯಾ ಸುಬ್ರಹ್ಮಣ್ಯ.

   

10 Comments on “ಬಾಳೆಕಾಯಿಯ ಬಗೆ ಬಗೆ ಅಡುಗೆ

  1. ಸರಳ ಹಾಗೂ ಸುಲಭವಾಗಿ ಮಾಡಬಹುದಾದ ಅಡುಗೆಗಳನ್ನು ತಿಳಿಸಿದ್ದೀರಿ ..ಧನ್ಯವಾದಗಳು

  2. . ಚಿಪ್ಸ್ (ನೇಂದ್ರ ಬಾಳೆ) ಮಾಡುವಾಗ ಸುಲಿದ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಉಪ್ಪು ಬೆಲ್ಲ ಹುಣಸೆರಸ ಚಿಟಿಕೆ ಮೆಣಸಿನಪುಡಿ ಹಾಕಿ ಬೇಯಿಸಿ ಉದ್ದಿನ ಬೇಳೆ ಸಾಸಿವೆ ಒಣಮೆಣಸಿನಕಾಯಿ ಒಗ್ಗರಣೆ ತೆಂಗಿನತುರಿಹಾಕಿ ಬೆರೆಸಿದರೆ ರುಚಿಕರ ಪಲ್ಯ.ವಿಜಯತ್ತಿಗೆ…ಮರೆತಿರಾ ..?

  3. ಇವತ್ತಿನ ಪರಿಸ್ಥಿತಿ ಹಿತ್ತಲಲ್ಲೇ ಸಿಗುವ ಇಂತಹ ತರಕಾರಿಗಳು ಆಪತ್ಬಾಂಧವರು ಎನ್ನಬಹುದು. ಖಾಯಿಲೆ ಹಬ್ಬುತ್ತಿರುವ, ವೇಗ ಹಾಗೂ ರೀತಿ ನೋಡುವಾಗ ಹೊರಗಡೆ ತರಕಾರಿ ಖರೀದಿಸಲೂ ಭಯ, ಹಾಗಾಗಿ ಈಗ ಹಿತ್ತಲ ಗಿಡವೇ ಮದ್ದು ಅಂತ ಗಾದೆ ಮಾತೂ ಬದಲಾಗಿದೆ.

  4. ಬಾಳೆಕಾಯಿಯಿಂದ ಪಲ್ಯ, ಸಾಂಬಾರು, ಬಜ್ಜಿ, ದೋಸೆ ತಯಾರಿಸುತ್ತಿದ್ದೆ.ಇನ್ನಷ್ಟು ರೆಸಿಪಿಗಳನ್ನು ತಿಳಿಸಿದಿರಿ. ಧನ್ಯವಾದಗಳು

  5. ಬೇಯಿಸಿದ ಮೈಸೂರು ಕದಳಿ ಬಾಳೆಕಾಯಿಗಳನ್ನು ಜಜ್ಜಿ ಉಪ್ಪು, ತೆಂಗಿನ ತುರಿ, ಒಗ್ಗರಣೆ ಸೇರಿಸಿ ಮಾಡಿದ ತಿಂಡಿ ನಮಗೆ ಬೆಳಗಿನ ತಿಂಡಿಯಾಗಿರುತ್ತಿತ್ತು ಬಾಲ್ಯದಲ್ಲಿ.

  6. ಬಾಳೆಕಾಯಿ ಯ ಬಹು ವಿಧದ ಅಡಿಗೆ ತಿಳಿಸಿದ ವಿಜಯಕ್ಕಾನಿಗೆ ಧನ್ಯವಾದ ಗಳು

  7. ಬಾಳೆಕಾಯಿ ಸೂಪರ್ ಅಡಿಗೆಗಳು..ಚೆನ್ನಾಗಿವೆ ಅಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *